ಕೊಟ್ಟಾಯಂ: ತಾತ್ಕಾಲಿಕ ಪರಿಹಾರ ಎಂಬಂತೆ ತರಕಾರಿ ಬೆಲೆಯಲ್ಲಿ ಇಳಿಕೆಯಾಗಿದೆ. ಓಣಂ ಸಮೀಪಿಸುತ್ತಿದ್ದಂತೆ ತರಕಾರಿ ಬೆಲೆಯಲ್ಲಿ ಇಳಿಕೆಯಾಗಿರುವುದು ಶ್ರೀಸಾಮಾನ್ಯನಿಗೆ ದೊಡ್ಡ ಸಮಾಧಾನ ತಂದಿದೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮೊದಲಿಗೆ ಭಾರೀ ಮಳೆ ಮತ್ತು ಬಳಿಕದ ಪ್ರತಿಕೂಲ ಹವಾಮಾನವು ಬೆಲೆ ಏರಿಕೆಗೆ ಕಾರಣವಾಯಿತು.
ಸದ್ಯ ಸ್ಥಳೀಯ ಮಾರುಕಟ್ಟೆಯ ತರಕಾರಿಗಳೂ ಮಾರುಕಟ್ಟೆಗೆ ಬರಲಾರಂಭಿಸಿವೆ. ಇದರಿಂದ ಒಂದು ತಿಂಗಳಿಂದ ಏರುತ್ತಿದ್ದ ತರಕಾರಿ ಬೆಲೆ ಇಳಿಕೆಯಾಗಿದೆ. ಟೊಮೇಟೊ, ಬೀನ್ಸ್, ಬೆಂಡೆಕಾಯಿ ಬೆಲೆ ಪಾತಾಳಕ್ಕೆ ಕುಸಿದಿದೆ. ಮೀನು, ಮಾಂಸ, ಅಕ್ಕಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ತರಕಾರಿ ಬೆಲೆಯಲ್ಲಿ ಇಳಿಕೆಯಾಗಿರುವುದು ಜನಸಾಮಾನ್ಯರಿಗೆ ಈಗ ನಿರಾಳತೆಯೊದಗಿಸಲಿದೆ. ಬೆಲೆ ಕುಸಿದಿದ್ದರೂ ಓಣಂ ದಿನಗಳು ಸಮೀಪಿಸುತ್ತಿದ್ದಂತೆ ಮತ್ತೆ ಬೆಲೆ ಏರಿಕೆಯಾಗುವ ಆತಂಕವೂ ಇಲ್ಲದಿಲ್ಲ.
ಕ್ಯಾರೆಟ್ 68, ಬೆಂಡೆಕಾಯಿ 40, ಬೀಟ್ ರೂಟ್ 60, ಟೊಮೇಟೊ 80(ಕೆಲವೆಡೆ 60), ಬೀನ್ಸ್ 60, ಎಲೆಕೋಸು 46, ಮಸೂರ 60, ಕರಿಬೇವು 40, ಪಪ್ಪಾಯಿ 60, ನುಗ್ಗೆ 60, ಬಿಳಿಬದನೆ 60, ಸೌತೆಕಾಯಿ 36, ಎಲೆಕೋಸು 40, ಈರುಳ್ಳಿ 30, ಸಿಹಿಗುಂಬಳ 40, ಕುರ್ಕೆ 80, ಹರಿವೆ 40, ಮೆಣಸಿನಕಾಯಿ 80 ಪ್ರಸ್ತುತ ತರಕಾರಿ ಬೆಲೆಗಳು.