ನಾಗ್ಪುರ: ಸೈದ್ಧಾಂತಿಕ ವಿರೋಧ ಮತ್ತು ಭಿನ್ನಾಭಿಪ್ರಾಯಗಳೇನೇ ಇದ್ದರೂ, ಸಮಾಜದಲ್ಲಿ ವೈಯಕ್ತಿಕ ದ್ವೇಷ ಎಂಬುದು ಇರಬಾರದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ.
ನಾಗ್ಪುರ: ಸೈದ್ಧಾಂತಿಕ ವಿರೋಧ ಮತ್ತು ಭಿನ್ನಾಭಿಪ್ರಾಯಗಳೇನೇ ಇದ್ದರೂ, ಸಮಾಜದಲ್ಲಿ ವೈಯಕ್ತಿಕ ದ್ವೇಷ ಎಂಬುದು ಇರಬಾರದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ.
ಆರ್‌ಎಸ್‌ಎಸ್ ನಾಯಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಸ್ಥಾಪಕ ದತ್ತಾಜಿ ದಿಡೋಲ್ಕರ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ ವೇಳೆ ಅವರು ಮಾತನಾಡಿದರು.
'ದಿಡೋಲ್ಕರ್ ತಾವು ನಂಬಿದ್ದ ಸಿದ್ಧಾಂತದೊಂದಿಗೆ ರಾಜಿಯಾಗದೇ, ಇತರರ ಅಭಿಪ್ರಾಯಗಳನ್ನು ಗೌರವಿಸುತ್ತಿದ್ದರು. ಅವರೊಂದಿಗೆ ಸ್ನೇಹಪೂರ್ವಕ ಸಂಬಂಧ ಹೊಂದಿದ್ದರು' ಎಂದು ಹೊಸಬಾಳೆ ಹೇಳಿದರು.
'ಸಿದ್ಧಾಂತಕ್ಕೆ ವಿರೋಧಗಳಿರಬಹುದು. ಸಮಾಜದಲ್ಲಿ ಯಾರೂ ವೈಯಕ್ತಿಕ ವಿರೋಧಗಳನ್ನು ಹೊಂದಿರಬಾರದು. ಒಂದು ಸಮಾಜವಾಗಿ ನಾವು ಜೀವಿಸುತ್ತಿರುವಾಗ ಪರಸ್ಪರರ ನಡುವೆ ವೈರತ್ವ ಇರಬಾರದು. ಮಾನವೀಯತೆ ಮತ್ತು ನ್ಯಾಯಪರತೆಯೊಂದಿಗೆ ಸರಳ ಜೀವನ ನಡೆಸಬೇಕು' ಎಂದು ಅವರು ಸಲಹೆ ನೀಡಿದರು.
ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪಕ ದತ್ತೋಪಂಥ ತೇಂಗ್ಡಿ ಕಾರ್ಮಿಕರ ಹಕ್ಕುಗಳಿಗೆ ಹೋರಾಡುತ್ತಿದ್ದಾಗ ಕಮ್ಯುನಿಸ್ಟ್ ನಾಯಕರೊಂದಿಗೂ ಸೌಹಾರ್ದ ಸಂಬಂಧ ಹೊಂದಿದ್ದರು ಎಂದು ಹೊಸಬಾಳೆ ಹೇಳಿದರು.