ಕಾಸರಗೋಡು : ಯುವಮೋರ್ಚಾ ಮುಖಂಡ ಯುವಮೋರ್ಚಾ ಕುಂಬಳೆ ಮಂಡಲ ಸಮಿತಿ ಉಪಾಧ್ಯಕ್ಷ ರಾಜೇಶ್(30)ನಿಗೂಢವಾಗಿ ಸಾವಿಗೀಡಾಗಿ ಒಂದು ತಿಂಗಳು ಕಳೆಯುವುದರೊಳಗೆ, ಇವರ ತಂದೆ ಲೋಕನಾಥ್(51)ಅವರ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಪತ್ತೆಯಾಗಿದೆ.
ಲೋಕನಾಥ್ ಅವರು ತನ್ನ ಸ್ನೇಹಿತರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ತೊಕ್ಕೊಟ್ಟು ಮಂಚಿಲದ ಇವರ ಸಹೋದರನ ಮನೆ ಸನಿಹದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಲೋಕನಾಥ್ ಅವರ ಪುತ್ರ ಹಾಗೂ ಯುವಮೋರ್ಚಾ ಕುಂಬಳೆ ಮಂಡಲ ಸಮಿತಿ ಉಪಾಧ್ಯಕ್ಷ ರಾಜೇಶ್(30)ಜು. 10 ರಂದು ನಾಪತ್ತೆಯಾಗಿದ್ದು, 12 ರಂದು ಇವರ ಮೃತದೇಹ ಉಳ್ಳಾಲ ಬೆಂಗರೆಯಲ್ಲಿ ಪತ್ತೆಯಾಗಿತ್ತು. ರಾಜೇಶ್ ಅವರ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಸ್ಥಳೀಯರು ಕೆಲ ದಿನಗಳ ಹಿಂದೆ ಕ್ರಿಯಾ ಸಮಿತಿ ರಚಿಸಿದ್ದರು. ಈ ಬಗ್ಗೆ .ಲೋಕನಾಥ್ ಜಿಲ್ಲಾ ಪೆÇಲೀಸ್ ಮುಖ್ಯಸ್ಥ ಡಾ. ವೈಭವ್ ಸಕ್ಸೇನಾ ಅವರಿಗೆ ದೂರು ನೀಡಿದ್ದು, ಇದರ ವಿಚಾರಣೆಗೆ ಸೋಮವಾರ ಕಚೇರಿಗೆ ಹಾಜರಾಗುವಂತೆ ಲೋಕನಾಥ್‍ಗೆ ಸೂಚಿಸಲಾಗಿತ್ತು. ಲೋಕನಾಥ್ ಸಾಕ್ಷಿ ಹೇಳಲು ತೆರಳಿರುವುದಾಗಿ ಮನೆಯವರು ಭಾವಿಸಿದ್ದರು. ಈ ಮಧ್ಯೆ ಲೋಕನಾಥ್ ಅವರು ಸ್ನೇಹಿತರಿಗೆ ಶಬ್ದ ಸಂದೇಶ ಕಳುಹಿಸಿದ ನಂತರ ಸಮುದ್ರಕ್ಕೆ ಹಾರಿದ್ದಾರೆನ್ನಲಾಗಿದೆ. ತನ್ನ ಹಾಗೂ ಪುತ್ರನ ಸಾವಿಗೆ ನಾಲ್ಕು ಮಂದಿ ಕಾರಣರಾಗಿದ್ದಾರೆ ಎಂಬುದು ಶಬ್ದ ಸಂದೇಶದಲ್ಲಿದ್ದು, ಈ ಬಗ್ಗೆ ಊರಿನಲ್ಲೂ ವದಂತಿ ಕೇಳಿಬರಲಾರಂಭಿಸಿದೆ. ತಂದೆ ಮತ್ತು ಪುತ್ರನ ಸಾವು ನಿಗೂಢತೆಗೆ ಕಾರಣವಾಗಿದೆ.