ಮುಂಬೈ: ಫಿಡೆ ಚೆಸ್ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರ ಪೋಷಕರಿಗೆ ಉದ್ಯಮಿ ಆನಂದ ಮಹೀಂದ್ರಾ ಅವರು ಉಡುಗೊರೆಯಾಗಿ ಎಲೆಕ್ಟ್ರಿಕ್ ಕಾರನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮುಂಬೈ: ಫಿಡೆ ಚೆಸ್ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರ ಪೋಷಕರಿಗೆ ಉದ್ಯಮಿ ಆನಂದ ಮಹೀಂದ್ರಾ ಅವರು ಉಡುಗೊರೆಯಾಗಿ ಎಲೆಕ್ಟ್ರಿಕ್ ಕಾರನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಮಾಹಿತಿಯನ್ನು ಆನಂದ್ ಮಹಿಂದ್ರಾ ಹಂಚಿಕೊಂಡಿದ್ದಾರೆ.
'ಪ್ರಜ್ಞಾನಂದ ಅವರನ್ನು ಪ್ರಶಂಸಿಸಲು ಥಾರ್ ವಾಹನವನ್ನು ಉಡುಗೊರೆಯಾಗಿ ನೀಡುವಂತೆ ಹಲವರು ಸಲಹೆ ನೀಡಿದ್ದಾರೆ. ಆದರೆ ನನ್ನ ಬಳಿ ಅದಕ್ಕಿಂತ ಉತ್ತಮ ಐಡಿಯಾ ಇದೆ. ಪ್ರಜ್ಞಾನಂದ ಅವರ ಪೋಷಕರಾದ ಶ್ರೀಮತಿ ನಾಗಲಕ್ಷ್ಮಿ ಹಾಗೂ ರಮೇಶ್‌ಬಾಬು ಅವರಿಗೆ ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡಬಹುದು. ಪ್ರಜ್ಞಾನಂದ ಅವರ ಸಾಧನೆಗೆ ಸಂಪೂರ್ಣ ಪ್ರೋತ್ಸಾಹ ಅವರಿಂದ ದೊರಕಿದೆ' ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಟ್ವೀಟ್‌ನಲ್ಲಿ ಮಹೀಂದ್ರಾ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಆಗಿರುವ ರಾಜೇಶ್ ಜಿಜುರಿಕರ್ ಅವರನ್ನು ಉಡುಗೊರೆ ನೀಡೋಣವೇ ಎಂದು ಪ್ರಶ್ನಿಸಿ ಟ್ಯಾಗ್ ಮಾಡಿದ್ದಾರೆ.
ಈ ಬಗ್ಗೆ ಬಳಕೆದಾರರೊಬ್ಬರು, ಭವಿಷ್ಯದ ಹೂಡಿಕೆಯನ್ನು ಹೋಲಿಸಿ ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಕಾಮೆಂಟ್ ಮಾಡಿದ್ದಾರೆ.