ಕೊಟ್ಟಾಯಂ: ಉಪಚುನಾವಣೆ ನಡೆಯಲಿರುವ ಪುತ್ತುಪಳ್ಳಿ ಕ್ಷೇತ್ರದಲ್ಲಿ ಓಣಂಕಿಟ್ ವಿತರಣೆಯನ್ನು ನಿಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ಸೂಚಿಸಿದ್ದಾರೆ.
ಚುನಾವಣಾ ಆಯೋಗದ ತೀರ್ಮಾನದವರೆಗೆ ಓಣಂಕಿಟ್ ವಿತರಣೆಯನ್ನು ನಿಲ್ಲಿಸುವ ಪ್ರಸ್ತಾಪವಿದೆ. ಮುಖ್ಯ ಚುನಾವಣಾಧಿಕಾರಿಗಳು ಕೊಟ್ಟಾಯಂ ಜಿಲ್ಲಾ ಚುನಾವಣಾಧಿಕಾರಿಗೆ ಈ ಕುರಿತು ಪತ್ರ ಬರೆದಿದ್ದಾರೆ.
ಆದರೆ, ಈ ಹಿಂದೆ ಕೊಟ್ಟಾಯಂ ಜಿಲ್ಲೆಯಲ್ಲಿ ಓಣಂಕಿಟ್ ವಿತರಣೆಯನ್ನು ನಿಲ್ಲಿಸುವ ಚುನಾವಣಾ ಆಯೋಗದ ಆದೇಶವನ್ನು ಹಿಂಪಡೆಯುವಂತೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಒತ್ತಾಯಿಸಿದ್ದರು. ಈ ಬೇಡಿಕೆಯೊಂದಿಗೆ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.
ಬಡವರ ಆಶಾಭಾವನೆಗೆ ಧಕ್ಕೆಯಾಗದಂತೆ ಓಣಂ ಆಚರಿಸಲು ಕಾಯುತ್ತಿರುವವರಿಗೆ ನಿರಾಸೆಯಾಗದಂತೆ ಕಿಟ್ ವಿತರಣೆಗೆ ಕೂಡಲೇ ಅನುಮತಿ ನೀಡಬೇಕು ಎಂದು ವಿ.ಡಿ.ಸತೀಶನ್ ಪತ್ರದಲ್ಲಿ ಕೋÀ್ದ್ದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಓಣಂಕಿಟ್ ವಿತರಣೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಸುದ್ದಿಯೂ ಇದೆ. ಸಾಕಷ್ಟು ಕಿಟ್ ಲಭ್ಯವಿಲ್ಲ ಎಂದು ತಿಳಿದುಬಂದಿದೆ.