HEALTH TIPS

ಕೌಟುಂಬಿಕ ವ್ಯವಸ್ಥೆ ಬುಡಮೇಲುಗೊಳಿಸುವ ಮಾದಕದ್ರವ್ಯ ವಿರುದ್ಧ ಜಾಗೃತಿ ಅಗತ್ಯ-ಮಹಿಳಾ ಆಯೋಗ

 


                    ಕಾಸರಗೋಡು: ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆ ಮತ್ತು ಸೈಬರ್ ಅಪರಾಧಗಳು ಕುಟುಂಬ ಜೀವನ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತಿದ್ದು, ಇದರ ವಿರುದ್ಧ ಪೆÇಲೀಸ್, ಅಬಕಾರಿ, ಸ್ಥಳೀಯ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸಲಿದೆ ಎಂಬುದಾಗಿ ಮಹಿಳಾ ಆಯೋಗದ ಸದಸ್ಯೆ, ವಕೀಲೆ ಪಿ. ಕುಞËಯಿಷಾ ತಿಳಿಸಿದ್ದಾರೆ.  ಅವರು ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಅದಾಲತ್‍ನ ನಂತರ ಸುದ್ದಿಗಾರರ ಜತೆ  ಮಾತನಾಡಿದರು. 

                  ಪ್ರಸಕ್ತ 30-40 ವರ್ಷ ವಯಸ್ಸಿನ ಯುವಕರಲ್ಲಿ ವಿಚ್ಛೇದನ, ಕೌಟುಂಬಿಕ ಹಿಂಸೆ ಮತ್ತು ಸೈಬರ್ ಅಪರಾಧ ಹೆಚ್ಚಗುತ್ತಿದೆ.  ಕುಟುಂಬ ಸಮಸ್ಯೆ ಉಲ್ಬಣಗೊಳ್ಳುವ ಮೊದಲು ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಾಗೃತ ಸಮಿತಿಗಳ ತರಬೇತಿ ಆಯೋಜಿಸಲಾಗುತ್ತಿದೆ. ಆಯೋಗದ ವತಿಯಿಂದ ಶಾಲಾ-ಕಾಲೇಜು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ಮಟ್ಟದಲ್ಲಿ ವಿವಿಧ ವಿಭಾಗಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 

           ಮಹಿಳಾ ಆಯೋಗದ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿವಾಹ ಪೂರ್ವ ಹಾಗೂ ವಿವಾಹದ ನಂತರದ ಕೌನ್ಸೆಲಿಂಗ್ ನೀಡಲಾಗುತ್ತಿದೆ. ವಿವಾಹ ನೋಂದಣಿಗಾಗಿ ಸ್ಥಳೀಯ ಸಂಸ್ಥೆಗಳಿಂದ ಪೂರ್ವ ವಿವಾಹ ಕೌನ್ಸೆಲಿಂಗ್ ಪ್ರಮಾಣ ಪತ್ರ ಕಡ್ಡಾಯಗೊಳಿಸುವಂತೆ ಸರ್ಕಾರಕ್ಕೆ ಆಯೋಗ ಈಗಾಗಲೇ ಶೀಪಾರಸು ಮಾಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಜಾಗೃತ ಸಮಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಆಯೋಗದ ಮುಂದೆ ಬರುವ ದೂರುಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು  ತಿಳಿಸಿದರು.  

               ಅದಾಲತ್‍ನಲ್ಲಿ 21 ದೂರುಗಳನ್ನು ಪರಿಗಣಿಸಲಾಗಿದ್ದು, ಇದರಲ್ಲಿ ಆರು ದೂರುಗಳಿಗೆ ಪರಿಹಾರ ಕಲ್ಪಿಸಲಾಗಿದೆ.  15 ದೂರುಗಳನ್ನು ಮುಂದಿನ ಅದಾಲತ್‍ನಲ್ಲಿ ಪರಿಗಣಿಸಲು ತೀರ್ಮಾನಿಸಲಾಯಿತು.  ಕೌಟುಂಬಿಕ ದೌಜ್ಯನ್ಯ,  ರಸ್ತೆ ವಿವಾದ, ಸೈಬರ್ ಅಪರಾಧ, ಡಿಎನ್‍ಎ ಪರೀಕ್ಷೆ ನಡೆಸಲು ಕಾನೂನು ನೆರವು ಮುಂತಾದ ವಿಷಯಗಳು ಪರಿಗಣನೆಗೆ ಬಂದಿರುವುದಾಘಿ ತಿಳಿಸಿದರು. ವಕೀಲೆ ಇಂದಿರಾವತಿ,  ಮಹಿಳಾ ಕೋಶದ ಎಸ್‍ಎಚ್‍ಒ ವಿ.ಸೀತಾ, ಎಎಸ್‍ಐ ಪಿ.ಜೆ.ಸಕೀನಾ, ಕೌಟುಂಬಿಕ ಸಲಹೆಗಾರ್ತಿ ರಮ್ಯಾಮೋಳ್, ಆಯೋಗದ ಅಧಿಕಾರಿಗಳಾದ ಬೈಜು ಶ್ರೀಧರನ್, ಪಿ.ಶ್ರೀಜಿತ್ ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries