ಗುರುವಾಯೂರು:ಓಣಂ ಉತ್ತರಾಡಂ ದಿನವಾದ ನಿನ್ನೆ ಸಾವಿರಾರು ಭಕ್ತರು ಶ್ರೀ ಗುರುವಾಯೂರಪ್ಪನ ದರ್ಶನ ಪಡೆದು ಕೃತಾರ್ಥರಾದರು.
ಕೃಷಿ ಸಮೃದ್ಧಿಯ ಕೈಗನ್ನಡಿಯಾಗಿ, ಭಗವಂತನಿಗೆ ಸಾವಿರಾರು ಬಾಳೆಹಣ್ಣಿನ ಗೊನೆ ಅರ್ಪಿಸಲಾಯಿತು. ಕ್ಷೇತ್ರದ ಪ್ರಧಾನ ಸಲಗಗಳಲ್ಲಿ ಒಂದಾದ ಇಂದ್ರಸೇನ್, ಅನಂತನಾರಾಯಣ ಮತ್ತು ವಿಷ್ಣು ತಮ್ಮ ಗಾಂಭೀರ್ಯಪೂರ್ಣ ಸವಾರಿಯ ಮೂಲಕ ಗಮನ ಸೆಳೆಯಿತು. ಭಕ್ತರು ದೇವರ ಚಿನ್ನದ ಧ್ವಜಸ್ತಂಭದ ಕೆಳಗೆ ಕರ್ಚಕುಲ ಸಮರ್ಪಣೆ ಮಾಡಿದರು. ಧ್ವಜಸ್ತಂಭದ ಬುಡದಲ್ಲಿ, ಕಳಗÀಂ ಆನಂದನ್ ಅವರು ದೇವರಿಗೆ ಅಕ್ಕಿ ಹಿಟ್ಟು ಮತ್ತು ತೆಂಗಿನಕಾಯಿಗಳೊಂದಿಗೆ ಜ್ಯೋತಿದರ್ಶನಗೈದರು. ಮಾರಾರ್ ಅವರ ಶಂಖಧ್ವನಿ ಮಧ್ಯೆ ದೇವಸ್ಥಾನದ ಮೇಲ್ಶಾಂತಿ ತೊಟ್ಟಂ ಶಿವಕರನ್ ನಂಬೂದಿರಿ ದೇವಸ್ಥಾನದ ಗರ್ಭಗೃಹದ ಬಾಗಿಲು ತೆರೆದರು.
ದೇವಸ್ವಂ ಅಧ್ಯಕ್ಷ ಡಾ. ವಿ.ಕೆ. ವಿಜಯನ್, ದೇವಸ್ವಂ ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಸ್ಸೇರಿ ಪರಮೇಶ್ವರನ್ ನಂಬೂದಿರಿಪಾಡ್, ಸಿ. ಮನೋಜ್, ಚೆಂಗಾರ ಸುರೇಂದ್ರನ್, ವಿ.ಜಿ. ರವೀಂದ್ರನ್, ಕೆ.ಆರ್. ಗೋಪಿನಾಥ್, ಮನೋಜ್ ಬಿ. ನಾಯರ್, ದೇವಸ್ಥಾನದ ಆಡಳಿತಾಧಿಕಾರಿ ಪಿ. ಮನೋಜ್ ಕುಮಾರ್, ಕೇಂದ್ರ ಸಚಿವ ವಿ. ಮುರಳೀಧರನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಐ.ಜಿ. ಪಿ. ವಿಜಯನ್, ಗುರುವಾಯೂರು ಸಹಾಯಕ ಪೆÇಲೀಸ್ ಆಯುಕ್ತ ಕೆ.ಜಿ. ಸುರೇಶ್ ಅವರಲ್ಲದೆ ನೂರಾರು ಭಕ್ತರು ದರ್ಶನ ಪಡೆದರು.
ರಾತ್ರಿ ಪೂಜೆ, ಭೋಜನದ ನಂತರ ಬಾಳೆಗೊನೆ ಸಮರ್ಪಣೆ ದೇವಸ್ಥಾನ ಮುಚ್ಚುವವರೆಗೂ ನಡೆಯಿತು. ದೇವಸ್ವಂ ವತಿಯಿಂದ ಆನೆಗಳಿಗೆ ವಿಶೇಷ ಆಹಾರ ವಿತರಣೆಯೂ ನಡೆಯಿತು. ತಿರುವೋಣಂ ಸದ್ಯಕ್ಕೆ ಸಿದ್ದತೆಯೂ ನಡೆಯಿತು. ಜೊತೆಗೆ ಬಾಳೆಗೊನೆ ಮೀಸಲಿಡಲಾಗಿದ್ದು, ಉಳಿದ ಗೊನೆಗಳನ್ನು ಹರಾಜು ಮಾಡಲಾಯಿತು. ತೀರ್ಥಕೊಳದ ಉತ್ತರದ ಅನ್ನಲಕ್ಷ್ಮಿ ಹಾಲ್ ಮತ್ತು ಪಥೇಕಾ ಚಪ್ಪರದಲ್ಲಿ ನಡೆಯುವ ತಿರುವೋಣ ಸದ್ಯದಲ್ಲಿ ಸುಮಾರು ಹತ್ತು ಸಾವಿರ ಭಕ್ತರಿಗೆ ದೇವಸ್ವಂ ಓಣಸದ್ಯವನ್ನು ಸಿದ್ಧಪಡಿಸಲಾಗಿದೆ.