ಬೆಂಗಳೂರು: ಪ್ರತಿಯೊಬ್ಬರ ಬಾಲ್ಯದ ನೆಚ್ಚಿನ ಸ್ನೇಹಿತ 'ರೆನಾಲ್ಡ್ಸ್' ಪೆನ್‌ಗೆ ಭಾರವಾದ ಹೃದಯದಿಂದ ವಿದಾಯ ಹೇಳಬೇಕಿದೆ. ಜಗತ್ತು ಕುದುರೆ ಗಾಡಿಗಳಿಂದ ರಾಕೆಟ್‌ಗಳಿಗೆ ಪರಿವರ್ತನೆಯಾಗಿದ್ದಕ್ಕೆ ಸಾಕ್ಷಿಯಾಗಿರುವ ಕೋಕಾ-ಕೋಲಾ ಮತ್ತು ಫೋರ್ಡ್‌ನಂತಹ ಬ್ರ್ಯಾಂಡ್‌ಗಳನ್ನು ಹಾಡಿ ಹೊಗಳುವವರು ಸಾಕಷ್ಟು ಜನರಿದ್ದಾರೆ, ಆದರೆ ನಾನು ಹೆಚ್ಚು ಸದ್ದಿಲ್ಲದೆ ಮಾರುಕಟ್ಟೆಯಿಂದ ತಣ್ಣಗೆ ನಿರ್ಗಮಿಸುವ ಸಾಯುತ್ತಿರುವ ಬ್ರ್ಯಾಂಡ್‌ಗಳಿಗೆ ಗೌರವ ಸಲ್ಲಿಸುವವರ ವರ್ಗಕ್ಕೆ ಸೇರಿದ್ದೇನೆ.
ವಾಸ್ತವದಲ್ಲಿ ರೆನಾಲ್ಡ್ಸ್ ತನ್ನ ಕಾರ್ಯಾಚರಣೆಯನ್ನು ಅಮೆರಿಕದಲ್ಲಿ ಆರಂಭಿಸಿತ್ತು ಎನ್ನುವುದು ಗೊತ್ತಾದರೆ ಅನೇಕರು ಅಚ್ಚರಿ ಪಡುವುದು ಖಂಡಿತ. ರೆನಾಲ್ಡ್ಸ್ ಪೆನ್ ಮೇಲಿದ್ದ '045' ಏನು ಎನ್ನುವುದು ಈ ಪೆನ್ ಅನ್ನು ಬಳಸಿದವರಿಗೂ ತಿಳಿದಿರಲಿಕ್ಕಿಲ್ಲ, ಅದು 1945ನ್ನು ಸೂಚಿಸುತ್ತದೆ. ಆ ವರ್ಷ ಕಂಪನಿಯು ಅಮೆರಿವನ್ನು ಬಿರುಗಾಳಿಯಂತೆ ಆವರಿಸಿಕೊಂಡಿತ್ತು. ಕ್ರಮೇಣ ಭಾರತಕ್ಕೆ ಕಾಲಿರಿಸಿದ ರೆನಾಲ್ಡ್ಸ್ ಇಲ್ಲಿ ಒಂದು ಐಕಾನ್ ಆಗಿತ್ತು. ರೆನಾಲ್ಡ್ಸ್ ಭಾರತದಲ್ಲಿ ಆರಂಭವಾಗಿರದೇ ಇರಬಹುದು, ಆದರೆ ಅದು ಪರಿಪೂರ್ಣವಾಗಿ ಭಾರತೀಯ ಕಂಪನಿಯಾಗಿತ್ತು. ದಶಕಗಳ ಕಾಲ ಅದು ಭಾರತೀಯ ಶಿಕ್ಷಣ ಮತ್ತು ಉದ್ಯೋಗ ವ್ಯವಸ್ಥೆಯ ಭಾಗವಾಗಿತ್ತು.
ರೆನಾಲ್ಡ್ಸ್‌ಗೆ ಪ್ರತಿಸ್ಪರ್ಧಿಗಳು ಇದ್ದವಾದರೂ ಅವು ನಿರಂತರವಾಗಿ ಸೋರಿಕೆಯಾಗುತ್ತಿದ್ದವು ಮತ್ತು ನಮ್ಮ ಜೇಬುಗಳಿಗೆ ನೀಲಿ ಬಣ್ಣವನ್ನು ಹರಡುತ್ತಿದ್ದವು, ಹೀಗಾಗಿ ಅವುಗಳ ಬಳಕೆ ಕಷ್ಟವಾಗಿತ್ತು. ಪಾರ್ಕರ್, ಪೈಲಟ್ ಮತ್ತು ಮಿಟ್ಸುಬಿಷಿಯಂತಹ ದುಬಾರಿ ಪೆನ್‌ಗಳೂ ಇದ್ದವು, ಆದರೆ ಈ ಐಷಾರಾಮಿ ಪೆನ್ನುಗಳಿಗೆ ಭಾರತಿಯ ಶಿಕ್ಷಣ ವ್ಯವಸ್ಥೆ ಹೊರೆಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಭಾರತೀಯ ಶಿಕ್ಷಣ ವ್ಯವಸ್ಥೆಗೆ ವಿಶಿಷ್ಟ ಬರವಣಿಗೆ ಅಗತ್ಯವಿದ್ದು ಅದನ್ನು ಸಾಮಾನ್ಯ ಪೆನ್ನುಗಳು ಪೂರೈಸಲು ಸಾಧ್ಯವಿಲ್ಲ. ನೀವು ಪ್ರತಿ ದಿನ,ಎಲ್ಲ ಸಮಯದಲ್ಲಿಯೂ ಬರೆಯುತ್ತಿದ್ದಿರಿ. ತರಗತಿಗಳಲ್ಲಿ ಟಿಪ್ಪಣಿಗಳು, ಹೋಮವರ್ಕ್, ಅಸೈನ್‌ಮೆಂಟ್ ಮತ್ತು ಪರೀಕ್ಷೆ ಈ ಎಲ್ಲದರಲ್ಲಿಯೂ ನೀವು ಬರೆಯುತ್ತಿದ್ದಿರಿ. ಇಷ್ಟು ಮಾತ್ರವಲ್ಲ,ಪತ್ರಗಳು, ಅರ್ಜಿಗಳನ್ನೂ ಗೀಚುತ್ತಿದ್ದಿರಿ. ಈ ಎಲ್ಲದರಲ್ಲಿಯೂ ರೆನಾಲ್ಡ್ಸ್ ಪೆನ್ ನಮ್ಮ ಜೇಬಿಗೆ ಭಾರವಾಗದೆ ಗುಣಮಟ್ಟದ ಕಾರ್ಯ ನಿರ್ವಹಿಸುತ್ತಿತ್ತು.
ಈ ಪೆನ್. ಭಾರತಕ್ಕೆ ಪರಿಚಯವಾದ ನಂತರ ಈ ಪೆನ್ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಯಿತು. ಬಾಟಾದಂತೆಯೇ, ರೆನಾಲ್ಡ್ಸ್ ಭಾರತದಲ್ಲಿ ಆರಂಭವಾಗದಿದ್ದರೂ, ಯುಎಸ್‌ಕ್ಕಿಂತ ಇಲ್ಲಿ ಈ ಪೆನ್‌ಗಳು ಹೆಚ್ಚಿನ ಮಾರಾಟ ಪಡೆದುಕೊಂಡಿದ್ದವು. ದಶಕಗಳ ಕಾಲ ರೆನಾಲ್ಡ್ಸ್ ಪೆನ್ನುಗಳು ಭಾರತೀಯ ಶಿಕ್ಷಣ ಮತ್ತು ಉದ್ಯೋಗ ವ್ಯವಸ್ಥೆಯ ಭಾಗವಾಗಿತ್ತು.
ರೆನಾಲ್ಡ್ಸ್ ಪೆನ್ನುಗಳಿಗೆ ಪಾರ್ಕರ್, ಪೈಲಟ್ ಮತ್ತು ಮಿತ್ಸುಬಿಷಿ ಸೇರಿದಂತೆ ಸುಮಾರು ಪೆನ್ನುಗಳು ಪ್ರತಿಸ್ಪರ್ಧಿಗಳಿದ್ದವು. ಆದರೆ ಜೇಬುಗಳಲ್ಲಿ ಇಟ್ಟುಕೊಂಡಾಗ ಈ ಪೆನ್‌ಗಳು ಸೋರಿಕೆಯಾಗಿ ಬಟ್ಟೆ, ಬ್ಯಾಗ್ ಎಲ್ಲವೂ ನೀಲಿ ಆಗುತ್ತಿದ್ದವು ಮತ್ತು ಬೆಲೆ ವಿಚಾರವಾಗಿ ದುಬಾರಿ ಕೂಡ ಆಗಿದ್ದವು. ಆದರೆ ರೆನಾಲ್ಡ್ಸ್ ಪೆನ್ನುಗಳಲ್ಲಿ ಈ ದೂರುಗಳೇ ಇರಲಿಲ್ಲ.
ತರಗತಿಯ ಟಿಪ್ಪಣಿಗಳು, ಹೋಮ್‌ವರ್ಕ್, ಅಸೈನ್‌ಮೆಂಟ್‌ಗಳು ಬರೆಯುತ್ತಿದ್ದೇವು. ಆದರೆ ಇಂದು Word, Docs ಮತ್ತು PDF ಬಂದಮೇಲೆ ಪೆನ್ ಹಿಡಿದು ಬರೆಯುವರ ಸಂಖ್ಯೆಯೇ ಕಡಿಮೆ ಆಗಿ ಬಿಟ್ಟಿದೆ. ಅಂತಹದರಲ್ಲಿ ಹೊಸ ಹೊಸ ಬ್ರ್ಯಾಂಡ್‌ಗಳು ಮಾರುಕಟ್ಟೆಗೆ ಬರುವುದು ಮರಿಚಿಕೆಯಾಗಿದೆ. ಹೀಗೆ ತೊಂಬತ್ತರ ದಶಕದಿಂದ ಎಲ್ಲರ ಪ್ರಿಯವಾಗಿದ್ದ ರೆನಾಲ್ಡ್ಸ್ ಪೆನ್ನುಗಳು ನಿಧಾನವಾಗಿ ಅಳಿಯುತ್ತಾ ಬಂದವು, ಪ್ರಸ್ತುತ ರೆನಾಲ್ಡ್ಸ್ ಪೆನ್ನುಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಐಕಾನಿಕ್ ರೆನಾಲ್ಡ್ಸ್ ಪೆನ್‌ನ ಕೊನೆಯ ಕೆಲವು ಬ್ಯಾಚ್‌ಗಳು ಅಮೆಜಾನ್‌ನಲ್ಲಿ ಲಭ್ಯವಿವೆ.
ಈಗ ಹುಡುಕಾಡಿದರೂ ಮಾರುಕಟ್ಟೆಯಲ್ಲಿ ರೆನಾಲ್ಡ್ಸ್ ಪೆನ್ ಸಿಗುತ್ತಿಲ್ಲ. ತನ್ನೊಂದಿಗಿನ ನಮ್ಮ ಬಾಲ್ಯದ ನೆನಪುಗಳನ್ನು ಬಿಟ್ಟು ಸದ್ದಿಲ್ಲದೆ ನಿರ್ಗಮಿಸಿದೆ. ವಿದಾಯ ಬಾಲ್ಯದ ಗೆಳೆಯ,ವಿದಾಯ..