ಮಂಜೇಶ್ವರ: ಕೇರಳ ರಾಜ್ಯ ತುಳು ಅಕಾಡಮಿಯ ದುರ್ಗಿಪಳ್ಳದಲ್ಲಿರುವ ಕಚೇರಿಯಲ್ಲಿ 77 ನೇ ಸ್ವಾತಂತ್ರ ದಿನಾಚರಣೆಯ ಭಾಗವಾಗಿ ದ್ವಜಾರೋಹಣ ಕಾರ್ಯಕ್ರಮ ನಡೆಯಿತು.
ತುಳು ಅಕಾಡೆಮಿ ಅಧ್ಯಕ್ಷ ಕೆ. ಆರ್ ಜಯಾನಂದ ದ್ವಜಾರೋಹಣೆಗೈದರು. ತುಳು ಕವಿತ್ರಿ ಕುಶಾಲಾಕ್ಷಿ ಕಣ್ವತೀರ್ಥ, ಕಾರ್ತಿಕ್ ಪೆರ್ಲ, ಹರಿಕಾಂತ ಕಾಸರಗೋಡು, ಗಂಗಾಧರ ದುರ್ಗೀಪಳ್ಳ, ಬಿ ಎಂ ಕರುಣಾಕರ ಶೆಟ್ಟಿ ಭಾಗವಹಿಸಿದ್ದರು.