ನವದೆಹಲಿ: ಅಮೆರಿಕದ ಸೈಬರ್‌ಸ್ಪೇಸ್ ಮತ್ತು ಡಿಜಿಟಲ್ ನೀತಿಗೆ ಸಂಬಂಧಿಸಿದ ವಿಶೇಷ ರಾಯಭಾರಿ (ಅಂಬಾಸಡರ್ ಅಟ್ ಲಾರ್ಜ್) ನಥಾನಿಯೆಲ್ ಸಿ.ಫಿಕ್ ಅವರು ಭಾರತ ಪ್ರವಾಸ ಆರಂಭಿಸಿದ್ದಾರೆ.
ನವದೆಹಲಿ: ಅಮೆರಿಕದ ಸೈಬರ್‌ಸ್ಪೇಸ್ ಮತ್ತು ಡಿಜಿಟಲ್ ನೀತಿಗೆ ಸಂಬಂಧಿಸಿದ ವಿಶೇಷ ರಾಯಭಾರಿ (ಅಂಬಾಸಡರ್ ಅಟ್ ಲಾರ್ಜ್) ನಥಾನಿಯೆಲ್ ಸಿ.ಫಿಕ್ ಅವರು ಭಾರತ ಪ್ರವಾಸ ಆರಂಭಿಸಿದ್ದಾರೆ.
ಆಗಸ್ಟ್ 20ರವರೆಗೆ ಭಾರತದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
ಜಿ-20 ಶೃಂಗಸಭೆ ಭಾಗವಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಡಿಜಿಟಲ್ ಆರ್ಥಿಕತೆ ಕುರಿತ ಸಚಿವರ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವ ಅಮೆರಿಕ ನಿಯೋಗದ ನೇತೃತ್ವವನ್ನು ನಥಾನಿಯೆಲ್ ವಹಿಸುವರು.
ಜಿ-20 ಅಧ್ಯಕ್ಷ ಸ್ಥಾನದಲ್ಲಿರುವ ಭಾರತವು ಡಿಜಿಟಲ್ ಮೂಲಸೌಕರ್ಯ, ಆರ್ಥಿಕತೆಯ ಸುರಕ್ಷತೆ, ಕೌಶಲ ಸೇರಿದಂತೆ ಡಿಜಿಟಲ್ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಮೆರಿಕದ ನಿಲುವುಗಳನ್ನು ನಥಾನಿಯೆಲ್ ವಿವರಿಸಲಿದ್ದಾರೆ ಎಂದು ಇವೇ ಮೂಲಗಳು ತಿಳಿಸಿವೆ.
ಈ ಪ್ರವಾಸದ ವೇಳೆ ಅವರು, ತಂತ್ರಜ್ಞಾನ ಕ್ಷೇತ್ರ ಉದ್ಯಮಿಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಭೇಟಿ ಮಾಡಿ, ಚರ್ಚಿಸುವರು.
ಕೋಲಂಬೊ ಭೇಟಿ ವೇಳೆ, ಅಮೆರಿಕ ಹಾಗೂ ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸುವರು. ಸೈಬರ್ ಸುರಕ್ಷತೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಡಿಜಿಟಲ್ ಸ್ವಾತಂತ್ರ್ಯದಂತಹ ವಿಷಯಗಳ ಕುರಿತು ಆಯಾ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವರು ಎಂದು ಮೂಲಗಳು ಹೇಳಿವೆ.