HEALTH TIPS

ಕಾಶ್ಮೀರದಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆ

                ಮ್ಮು ಕಾಶ್ಮೀರ: 71ನೇ ಆವೃತ್ತಿಯ ಮಿಸ್ ವರ್ಲ್ಡ್ 2023 ಸ್ಪರ್ಧೆಯು ಈ ಬಾರಿ ಕಾಶ್ಮೀರದಲ್ಲಿ ನಡೆಯಲಿದೆ ಎಂದು ಮಿಸ್ ವರ್ಲ್ಡ್ ಸಂಸ್ಥೆಯ ಮುಖ್ಯಸ್ಥೆ ಮತ್ತು ಸಿಇಒ ಜುಲಿಯಾ ಎರಿಕ್‌ ಮೊರ್ಲೆ ತಿಳಿಸಿದ್ದಾರೆ.

             ವಿಶ್ವ ಸುಂದರಿ ಸಂಸ್ಥೆಯ ಸಿಬ್ಬಂದಿ ನವೆಂಬರ್‌ನಲ್ಲಿ ಕಾಶ್ಮೀರಕ್ಕೆ ಆಗಮಿಸಲಿದ್ದಾರೆ.

ಡಿಸೆಂಬರ್‌ 9 ರಂದು ಕಾರ್ಯಕ್ರಮ ನಡೆಯಲಿದೆ. ಈ ಸ್ಪರ್ಧೆಯಲ್ಲಿ 140 ದೇಶಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಮೊರ್ಲೆ ಮಾಹಿತಿ ನೀಡಿದ್ದಾರೆ.

               ಕಾಶ್ಮೀರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಶ್ಮೀರದ ಜನರು ಸುಂದರವಾದ ಮನಸ್ಸನ್ನು ಹೊಂದಿದ್ದೀರಿ, ನಿಜವಾಗಿಯೂ ತುಂಬ ಖುಷಿಯಾಗುತ್ತಿದೆ. ನವೆಂಬರ್‌ ಬರುವುದನ್ನು ನಾವು ಎದುರು ನೋಡುತ್ತಿದ್ದೇವೆ' ಎಂದು ಮೊರ್ಲೆ ಹೇಳಿದ್ದಾರೆ.


             ಸುದ್ದಿಗೋಷ್ಠಿಯಲ್ಲಿ ಈ ಹಿಂದಿನ ವಿಶ್ವಸುಂದರಿ ಸ್ಪರ್ಧೆಯ ವಿಜೇತರಾದ ಕೆರೊಲಿನಾ ಬೈಲಾವ್ಸ್ಕಾ, ಭಾರತದ ಸಿನಿ ಶೆಟ್ಟಿ, ಕೆರಿಬಿಯನ್‌ ಎಮ್ಮಿ ಪೆನಾ ಪಾಲ್ಗೊಂಡಿದ್ದರು.

                   ಭಾರತವು 1996ರಲ್ಲಿ ಕೊನೆಯದಾಗಿ ಬೆಂಗಳೂರಿನಲ್ಲಿ ಈ ಪ್ರಮುಖ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಆಯೋಜಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries