ತಿರುವನಂತಪುರಂ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿ ಮಲೆಯಾಳಂ ಫೇಸ್ ಬುಕ್ ಪೋಸ್ಟ್ ತೀವ್ರ ಟೀಕೆಗೊಳಗಾಗಿದೆ. ಪೋಸ್ಟ್ ಅಶ್ಲೀಲ ಮತ್ತು ಜಾತಿ ನಿಂದನೆಯನ್ನು ಒಳಗೊಂಡಿದೆ. ಪ್ರತಿಭಾ ನಾಯರ್ ಹೆಸರಿನ ಮಲಯಾಳಿ ಖಾತೆಯಿಂದ ಅಶ್ಲೀಲ ಪೋಸ್ಟ್ ಪ್ರಕಟಗೊಂಡಿದೆ.
ಮಣಿಪುರದಲ್ಲಿ ನಡೆದ ಘಟನೆಗಳ ಹಿನ್ನಲೆಯಲ್ಲಿ ರಾಷ್ಟ್ರಪತಿಗಳ ಪೋಟೋದೊಂದಿಗೆ ಅಶ್ಲೀಲತೆ ಮತ್ತು ಇತರ ಅಕ್ಷೇಪಾರ್ಹ ವಿಷಯಗಳ ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಜನಾಂಗೀಯ ಉಲ್ಲೇಖಗಳನ್ನು ಸಹ ಒಳಗೊಂಡಿದೆ. ಬರಹದಲ್ಲಿ ರಾಷ್ಟ್ರಪತಿಗಳ ಮೇಲೆ ಅತ್ಯಾಚಾರ ಮಾಡುವಂತೆಯೂ ಕರೆ ನೀಡಲಾಗಿದೆ.
ಪೋಸ್ಟ್ ಮಾಡಿದ ಪ್ರೊಪೈಲ್ ನಕಲಿ ಎಂಬುದು ಪ್ರಾಥಮಿಕ ತೀರ್ಮಾನವಾಗಿದೆ. ಘಟನೆಯ ಕುರಿತು ಪೋಲೀಸ್ ಪ್ರಧಾನ ಕಛೇರಿ ತನಿಖೆ ಆರಂಭಿಸಿದೆ. ಖಾತೆಯ ಹಿಂದಿರುವ ವ್ಯಕ್ತಿಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಪೋಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪರಿಶಿಷ್ಟ ಜಾತಿ/ಪಂಗಡ ಸಂರಕ್ಷಣಾ ಸಮಿತಿಯ ಪೋಷಕ ಸತೀಶ್ ಪರನ್ನೂರು ರಾಜ್ಯ ಪೋಲೀಸ್ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದಾರೆ.
ಸತೀಶ್ ಪರನ್ನೂರು ಮಾತನಾಡಿ, ಭಾರತದ ರಾಷ್ಟ್ರಪತಿಯನ್ನು ಅವಮಾನಿಸುವುದು ಮತ್ತು ಮಾನಹಾನಿಕರ ಸಾದೃಶ್ಯವನ್ನು ಬಳಸುವುದು ದೇಶವನ್ನು ಅವಮಾನಿಸಿದಂತೆ. ಈ ಅಪರಾಧಗಳನ್ನು ಮಾಡಿದವರ ಮೇಲೆ ದೇಶದ್ರೋಹದ ಮೊಕದ್ದಮೆ ಹೂಡಬೇಕು ಮತ್ತು ಶಿಕ್ಷೆ ವಿಧಿಸಬೇಕು. ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸಿ ದೇಶದಲ್ಲಿ ಸೌಹಾರ್ದತೆ ಹಾಳು ಮಾಡುವ ಉದ್ದೇಶದಿಂದ ಕೆಲಸ ಮಾಡುವ ಗುಂಪುಗಳು ಘಟನೆಯ ಹಿಂದೆ ಇವೆ ಎಂದು ಸತೀಶ್ ಪರನ್ನೂರು ದೂರಿನಲ್ಲಿ ಆರೋಪಿಸಿದ್ದಾರೆ.