ಕೊಚ್ಚಿ: ಓಣಂ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ, ರೈಲ್ವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಆಗಸ್ಟ್ 22 ರಿಂದ ಸೇವೆಗಳು ಆರಂಭಗೊಳ್ಳಲಿದೆ. ರೈಲುಗಳು ಕೆಳಗಿನಂತಿರಲಿವೆ:
ಎರ್ನಾಕುಳಂ-ಚೆನ್ನೈ ಸೆಂಟ್ರಲ್ (06046) ಎರ್ನಾಕುಳಂನಿಂದ ಆಗಸ್ಟ್ 24, 31 ಮತ್ತು ಸೆಪ್ಟೆಂಬರ್ 7 ರಂದು ರಾತ್ರಿ 9 ಗಂಟೆಗೆ ಹೊರಡಲಿದೆ.
ಚೆನ್ನೈ ಸೆಂಟ್ರಲ್-ಎರ್ನಾಕುಳಂ ವಿಶೇಷ (06045) ಆಗಸ್ಟ್ 25, ಸೆಪ್ಟೆಂಬರ್ 1 ಮತ್ತು 8 ರಂದು ಮಧ್ಯಾಹ್ನ 3.10 ಕ್ಕೆ ಹೊರಟು ಮರುದಿನ ಮಧ್ಯಾಹ್ನ 3 ಗಂಟೆಗೆ ಎರ್ನಾಕುಳಂಂ ತಲುಪಲಿದೆ.
ತಾಂಬರಂ-ಮಂಗಳೂರು ವಿಶೇಷ (06041) ಆಗಸ್ಟ್ 22, 29 ಮತ್ತು ಸೆಪ್ಟೆಂಬರ್ 5 ರಂದು ತಾಂಬರಂನಿಂದ ಮಧ್ಯಾಹ್ನ 1.30 ಕ್ಕೆ ಹೊರಟು ಮರುದಿನ 6.45 ಕ್ಕೆ ಮಂಗಳೂರಿಗೆ ತಲುಪಲಿದೆ.
ಮಂಗಳೂರು-ತಾಂಬರಂ ವಿಶೇಷ (06042) ಮಂಗಳೂರಿನಿಂದ ಆಗಸ್ಟ್ 23, 30 ಮತ್ತು ಸೆಪ್ಟೆಂಬರ್ 06 ರಂದು ಬೆಳಿಗ್ಗೆ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 4.45 ಕ್ಕೆ ತಾಂಬರಂ ತಲುಪಲಿದೆ.
ಕೊಚುವೇಲಿ-ಬೆಂಗಳೂರು ವಿಶೇಷ (06083) ಕೊಚ್ಚುವೇಲಿಯಿಂದ ಆಗಸ್ಟ್ 22, 29 ಮತ್ತು ಸೆಪ್ಟೆಂಬರ್ 5 ರಂದು ಸಂಜೆ 6.05 ಕ್ಕೆ ಹೊರಟು ಮರುದಿನ 10.55 ಕ್ಕೆ ಬೆಂಗಳೂರು ತಲುಪುತ್ತದೆ.
ಬೆಂಗಳೂರು-ಕೊಚುವೇಲಿ ವಿಶೇಷ (06084) ಬೆಂಗಳೂರಿನಿಂದ ಆಗಸ್ಟ್ 23, 30 ಮತ್ತು ಸೆಪ್ಟೆಂಬರ್ 6 ರಂದು ಮಧ್ಯಾಹ್ನ 12.45 ಕ್ಕೆ ಹೊರಟು ಮರುದಿನ 6 ಕ್ಕೆ ಕೊಚುವೇಲಿಗೆ ತಲುಪುತ್ತದೆ.