ಕುಂಬಳೆ: ಭಾರತೀಯ ಜನತಾ ಪಕ್ಷ ಮೋದಿ ಸರ್ಕಾರದ 9ನೇ ವμರ್Áಚರಣೆಯ ಭಾಗವಾಗಿ ದೇಶದಾದ್ಯಂತ ನಡೆಸುತ್ತಿರುವ ಬೂತ್ ದರ್ಶನ್ ಯಾತ್ರೆ ಕಾರ್ಯಕ್ರಮ ಕುಂಬಳೆ ಮಂಡಲದ ಕಣ್ಣೂರಿನಲ್ಲಿ ನಡೆಯಿತು. ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ ಅವರ ನೇತೃತ್ವದಲ್ಲಿ ಬೂತಿನ ಹಿರಿಯ ಕಾರ್ಯಕರ್ತರನ್ನು, ಸಮುದಾಯನೇತಾರನ್ನು, ಪ್ರಮುಖ ಮತದಾರರನ್ನು, ಆರಾಧನಾಲಯಗಳನ್ನು ಭೇಟಿ ನೀಡಿ ಮೋದಿ ಸರ್ಕಾರದ ಯೋಜನೆಗಳ ವಿವರಣೆ ನೀಡಲಾಯಿತು. ಸಂಜೆ ಬೂತ್ ಸಮಿತಿ ಸಭೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಬೂತ್ ಅಧ್ಯಕ್ಷ ನಟೇಶ್ ಭಟ್ ಮದನಗುಳಿ, ಮಂಡಲ ಕಾರ್ಯದರ್ಶಿ ಸ್ವಾಗತ್ ಸೀತಾಂಗೋಳಿ ಮತ್ತು ಪಂಚಾಯತಿ ಸದಸ್ಯ ಜನಾರ್ದನ ಕಣ್ಣೂರು, ಕಾರ್ಯಕರ್ತರು ಭಾಗವಹಿಸಿದ್ದರು.