ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ರಾಮಾಯಣ ಮಾಸಾಚರಣೆ ಸಪ್ತಾಹ ಸಂಪನ್ನಗೊಂಡಿತು. ಕಳೆದ ಒಂದು ವಾರಕಾಲ ರಾಮಾಯಣ ಕುರಿತಾದ ಪ್ರಸಂಗದ ಯಕ್ಷಗಾನ ತಾಳಮದ್ದಳೆ, ಭಜನೆ, ಪ್ರವಚನ ಆಯೋಜಿಸಲಾಗಿತ್ತು.
ದುಬೈ ಸುವರ್ಣ ಪ್ರತಿಷ್ಠಾನದ ಪ್ರಭಾಕರ ಡಿ.ಸುವರ್ಣ ಕರ್ನಿರೆ ಸಮಾರಂಭ ಉದ್ಘಾಟಿಸಿದರು.
ಕ್ಯಾಂಪ್ಕೋ ನಿರ್ದೇಶಕ, ಪ್ರಗತಿಪರ ಕೃಷಿಕ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿಯ ಗಂಡುಕಲೆ ಯಕ್ಷಗಾನ ನಿರಕ್ಷರಿಗಳಲ್ಲೂ ಪಾಂಡಿತ್ಯ ಬೆಳೆಸುವುದರ ಜತೆಗೆ ಜನರಲ್ಲಿ ಸಂಸ್ಕೃತಿ ಜಾಗೃತಗೊಳಿಸಿದೆ. ಪುರಾಣಗಳ ಕಥೆಗಳ ಪರಿಚಯ, ಶ್ರೀರಾಮನ ಆದರ್ಶಗುಣಗಳನ್ನು ಜನರಬಳಿ ತಲುಪಿಸುವಲ್ಲ ಯಕ್ಷಗಾನ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.
ರಂಗಪ್ಪಯ್ಯ ಹೊಳ್ಳ, ಬಾರ್ಕೂರಿನ ದಾಮೋದರ ಶರ್ಮ, ಬೆಂಗಳೂರಿನ ಉಧ್ಯಮಿ ಶ್ರೀ ಲಕ್ಮೀನಾರಯಣ ಐವರ್ನಾಡು. ಬ್ರಹ್ಮಶ್ರೀ ಕೃಷ್ಣರಾಜ ತಂತ್ರಿ ಕುಡುಪು, ಕೆ.ಆರ್. ಆಳ್ವ ಕಂಬಾರು, ಶೀನಶೆಟ್ಟಿ ಕಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಪ್ರಸಿದ್ದ ಕಲಾವಿದರಿಂದ ಪುತ್ತಿಗೆ ರಾಮಕೃಷ್ಣ ಜೊಯಿಸ ವಿರಚಿತ ಶ್ರೀರಾಮ ನಿಜಪಟ್ಟಾಭಿಷೇಕ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಿರಿಬಾಗಿಲು ರಾಮಕೃಷ್ಣ ಮಯ್ಯ, ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ, ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ, ಮುರಾರಿ ಕಡಂಬಳಿತ್ತಾಯ, ಲವಕುಮಾರ್ ಐಲ ಹಿಮ್ಮೇಳದಲ್ಲಿ ಸಹಕರಿಸಿದರು. .
ಶ್ರೀ ಮಹಾದೇವ ಭಜನಾ ಸಂಘ ಪುಳ್ಕೂರು ಸಿರಿಬಾಗಿಲು ಇವರಿಂದ ಭಜನೆ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ಪ್ರವಚನ ನಡೆಯಿತು. ಪ್ರತಿಷ್ಠಾನದ ವತಿಯಿಂದ ಪ್ರವಚನಕಾರರಾದ ಪುಂಡರೀಕಾಕ್ಷ ಬೆಳ್ಳೂರು, ಯೋಗಾಚಾರ್ಯರನ್ನು ಗೌರವಿಸಲಾಯಿತು. ಮೋಹನದಾಸ ಶೆಟ್ಟಿ ಸಿರಿಬಾಗಿಲು ಕಾರ್ಯಕ್ರಮ ನಿರೂಪಿಸಿದರು. ಜಗದೀಶ ಕೆ.ಕೂಡ್ಲು ವಂದಿಸಿದರು.