ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣ ವಠಾರದ ಸೂಪರ್‍ಮಾರ್ಕೆಟ್‍ಗಳು, ತರಕಾರಿ ವ್ಯಾಪಾರಿಗಳು, ದಿನಸಿ ಅಂಗಡಿಗಳು, ಚಿಕನ್ ಸ್ಟಾಲ್‍ಗಳು, ಬೇಕರಿಗಳು, ಮಾರುಕಟ್ಟೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಖುದ್ದಾಗಿ ಭೇಟಿ ನೀಡಿ ತಪಾಸಣೆ ನಡೆಸಿದರು.
ಸುಮಾರು 30 ಅಂಗಡಿಗಳನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳುಜ ಪರಿಶೀಲಿಸಿದರು. ಸೂಪರ್‍ಮಾರ್ಕೆಟ್‍ಗಳು, ಮಾರುಕಟ್ಟೆ ಅಂಗಡಿಗಳುನಲ್ಲಿ ತಪಾಸಣೆ ನಡೆಸಲಾಯಿತು ಎಲ್ಲ ಅಂಗಡಿಗಳಲ್ಲಿ ದರಪಟ್ಟಿಯನ್ನು ಪ್ರದರ್ಶಿಸಬೇಕು, ದಿನಸಿ ಅಂಗಡಿಗಳಲ್ಲಿ ಸುಮಾರು ಐದು ವಿವಿಧ ಬಗೆಯ ಮೆಣಸಿನಕಾಯಿಗಳಿಗೆ ಪ್ರತಿಯೊಂದರ ಮೇಲೆ ಬೆಲೆಯ ಮಾಹಿತಿಯನ್ನು ಪ್ರದರ್ಶಿಸುವ ಫಲಕಗಳನ್ನು ಹಾಕಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ರಸ್ತೆ ಬದಿ ವ್ಯಾಪಾರಿಗಳೂ ದರಪಟ್ಟಿ ಪ್ರದರ್ಶಿಸುವಂತೆ ಸೂಚಿಸಿದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕೆ.ನವೀನ್‍ಬಾಬು, ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಎ.ಸಾಜಿದ್, ತಾಲೂಕು ನಾಗರಿಕ ಪೂರೈಕೆ ಅಧಿಕಾರಿ ಕೆ.ವಿ.ದಿನೇಶನ್, ಕಾಸರಗೋಡು ತಾಲೂಕು ಪಡಿತರ ನಿರೀಕ್ಷಕರಾದ ಎನ್.ಅನಿಲ್‍ಕುಮಾರ್, ಕೆ.ಪಿ.ಬಾಬು, ತೂಕ ಮತ್ತು ಅಳತೆ ವಿಭಾಗ ನಿರೀಕ್ಷಕ ಎಂ.ರತೀಶ್, ತೂಕ ಮತ್ತು ಅಳತೆ ವಿಭಾಗ ವಿಭಾಘ ಸಹಾಯಕರು, ನಾಗರಿಕ ಪಊರೈಕೆ ಕಚೇರಿ ಹೆಡ್ ಕ್ಲರ್ಕ್ ಬಿ.ಬಿ.ರಾಜೀವ್, ಚಾಲಕರಾದ ಪಿ.ಬಿ.ಅನ್ವರ್, ಪಿ.ಅಜಿತ್ ಮತ್ತಿತರರು ಭಾಗವಹಿಸಿದ್ದರು.