ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆಯುವ ರಾಮಾಯಣ ವಾಚನ ಪ್ರವಚನ ಕಾರ್ಯಕ್ರಮ ಆರಂಭಗೊಂಡಿತು.
ಡಾ.ಜಯಶ್ರೀ ನಾಗರಾಜ್ ಭಟ್ ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹರಿದಾಸ ಜಯಾನಂದ ಕುಮಾರ್ ಉಪಸ್ಥಿತರಿದ್ದು, ರಾಮಾಯಣದ ಆದರ್ಶವನ್ನು ಹೇಳಿದರು. ಮನ್ನಿಪ್ಪಾಡಿಯ ಶ್ರೀ ಧೂಮಾವತಿ ಮಹಿಳಾ ಭಜನಾ ಸಂಘದಿಂದ ಭಜನೆ ನಡೆಯಿತು. ಆ ಬಳಿಕ ಕೊಚ್ಚಿ ಗೋಪಾಲಕೃಷ್ಣ ಭಟ್ ರಾಮಾಯಣ ಕಥಾ ವಾಚನ ನಡೆಸಿದರು. ಶ್ರೀಹರಿ ಭಟ್ ಪೆಲ್ತಾಜೆ ಪ್ರವಚನ ನೀಡಿದರು. ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಮಾಯಣ ಪ್ರವಚನದ ನಂತರ 108 ಸಲ ಶ್ರೀ ರಾಮನಾಮ ಜಪ ನಡೆಯಿತು.