ಜೋಧಪುರ: ಪಾಕಿಸ್ತಾನಕ್ಕೆ ತೆರಳಿ ಅಲ್ಲಿಯ ವ್ಯಕ್ತಿಯನ್ನು ಭಾರತದ ಮಹಿಳೆ ಮದುವೆಯಾದ ಕುರಿತು ಎದ್ದ ವಿವಾದವು ಇನ್ನೂ ಜನರ ನೆನಪಿನಿಂದ ಮಾಸಿಲ್ಲ, ಅಷ್ಟರಲ್ಲಿ ರಾಜಸ್ಥಾನದ ವಕೀಲರೊಬ್ಬರು ಪಾಕಿಸ್ತಾನಿ ಮಹಿಳೆಯನ್ನು ಈಚೆಗೆ ವರ್ಚುವಲ್ ಆಗಿ ಮದುವೆ ಆಗಿರುವ ವಿಷಯ ಬೆಳಕಿಗೆ ಬಂದಿದೆ.

ಜೋಧಪುರದವರಾದ ವಕೀಲ ಮೊಹಮ್ಮದ್ ಅರ್ಬಾಜ್ ಅವರು ಪಾಕಿಸ್ತಾನದ ಕರಾಚಿಯ ಅಮೀನಾ ಅವರನ್ನು ಕಳೆದವಾರ ಮದುವೆಯಾಗಿದ್ದಾರೆ. ಎರಡೂ ಕಡೆಯವರ ಕುಟುಂಬ ಸದಸ್ಯರ ಸಮ್ಮುಖದಲ್ಲೇ ಈ ಮದುವೆ ನಡೆದಿದೆ.
ಅಮೀನಾ ಅವರ ಕುಟುಂಬಕ್ಕೆ ವೀಸಾ ದೊರಕುವುದು ವಿಳಂಬವಾದ ಕಾರಣ ವರ್ಚುವಲ್ ಆಗಿ ಮದುವೆ ಸಂಪ್ರದಾಯಗಳನ್ನು ನೆರವೇರಿಸಲಾಗಿದೆ. ಇದಕ್ಕಾಗಿ ದೊಡ್ಡ ಟಿವಿ ಪರದೆಗಳನ್ನು ಎರಡೂ ಕಡೆಯೂ ಅಳವಡಿಸಲಾಗಿತ್ತು. ಎರಡೂ ಬದಿಯ ಖಾಸಿಗಳು ಮದುವೆ ಶಾಸ್ತ್ರವನ್ನು ನೆರವೇರಿಸಿದ್ದಾರೆ.
'ಕೆಲ ತಿಂಗಳ ಹಿಂದೆಯೇ ಮದುವೆ ನಿಗದಿಪಡಿಸಲಾಗಿತ್ತು. ವಧುವಿನ ಕಡೆಯವರಿಗೆ ನಿಗದಿತ ಸಮಯದಲ್ಲಿ ವೀಸಾ ಸಿಗದ ಕಾರಣ ವರ್ಚುವಲ್ ಆಗಿ ಮದುವೆ ನಡೆಸಬೇಕಾಯಿತು. ನೆರೆಯ ದೇಶಗಳ ನಡುವೆ ಈ ರೀತಿಯ ಮದುವೆಗಳು ಹೊಸದಲ್ಲ. ಭಾರತ- ಪಾಕಿಸ್ತಾನದ ನಡುವಿನ ಸಂಬಂಧ ಅಷ್ಟು ಹಿತಕರವಾಗಿಲ್ಲದಿದ್ದರೂ ಕೋವಿಡ್ ಸಮಯದಲ್ಲಿ ಈ ರೀತಿಯ ಮದುವೆಗಳು ಸಾಕಷ್ಟು ನಡೆದಿವೆ' ಅರ್ಬಾಜ್ ಹೇಳಿದ್ದಾರೆ.