HEALTH TIPS

ರಿಲಯನ್ಸ್ ಆಡಳಿತ ಮಂಡಳಿಗೆ ಮುಕೇಶ್ ಅಂಬಾನಿ ಮಕ್ಕಳು

               ಮುಂಬೈ: ಮಾರುಕಟ್ಟೆ ಬಂಡವಾಳದ ಲೆಕ್ಕದಲ್ಲಿ ದೇಶದ ಅತಿದೊಡ್ಡ ಉದ್ಯಮವಾಗಿರುವ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ಉತ್ತರಾಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆಗೆ ಕಂಪನಿಯ ಅಧ್ಯಕ್ಷ ಮುಕೇಶ್ ಅಂಬಾನಿ ಚಾಲನೆ ನೀಡಿದ್ದಾರೆ. ತಮ್ಮ ಮಕ್ಕಳಾದ ಇಶಾ, ಆಕಾಶ್ ಮತ್ತು ಅನಂತ್ ಅವರನ್ನು ಆರ್‌ಐಎಲ್‌ ಆಡಳಿತ ಮಂಡಳಿಗೆ ನೇಮಕ ಮಾಡಿದ್ದಾರೆ.

             ತಾವು ಕಂಪನಿಯ ಅಧ್ಯಕ್ಷ ಸ್ಥಾನದಲ್ಲಿ 2024ರ ಏಪ್ರಿಲ್‌ ನಂತರ ಮತ್ತೆ ಐದು ವರ್ಷಗಳ ಅವಧಿಗೆ ಮುಂದುವರಿಯುವುದಾಗಿಯೂ ಮುಕೇಶ್ ಅಂಬಾನಿ ಪ್ರಕಟಿಸಿದ್ದಾರೆ. ಆರ್‌ಐಎಲ್‌ ಈಗ 200 ಬಿಲಿಯನ್ ಡಾಲರ್ (₹16.52 ಲಕ್ಷ ಕೋಟಿ) ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದೆ. ಉದ್ಯಮದ ವಹಿವಾಟುಗಳು ಇಂಧನದಿಂದ ತಂತ್ರಜ್ಞಾನ ಜಗತ್ತಿನವರೆಗೆ ವಿಸ್ತರಿಸಿವೆ.

               ಇಶಾ, ಆಕಾಶ್ ಮತ್ತು ಅನಂತ್ ಅವರನ್ನು ಕಂಪನಿಯ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಪ್ರಸ್ತಾವಕ್ಕೆ ಆಡಳಿತ ಮಂಡಳಿಯ ಒಪ್ಪಿಗೆ ದೊರೆತಿದೆ.

               ಮುಕೇಶ್ ಅಂಬಾನಿ ಅವರು ತಮ್ಮ 20ನೆಯ ವಯಸ್ಸಿನಲ್ಲಿ ರಿಲಯನ್ಸ್ ಆಡಳಿತ ಮಂಡಳಿ ಸೇರಿದ್ದರು. 'ಇಶಾ, ಆಕಾಶ್ ಮತ್ತು ಅನಂತ್ ಅವರಲ್ಲಿ ನಾನು ನನ್ನನ್ನು ಹಾಗೂ ನನ್ನ ತಂದೆಯನ್ನು ಕಾಣುತ್ತಿದ್ದೇನೆ. ನಾಯಕತ್ವದ ಸ್ಥಾನಕ್ಕೆ ನಾನು ಅವರಿಗೆ ಮಾರ್ಗದರ್ಶನ ಮಾಡಲಿದ್ದೇನೆ' ಎಂದು ಮುಕೇಶ್ ಅಂಬಾನಿ ಅವರು ಕಂಪನಿಯ ಷೇರುದಾರರ ವಾರ್ಷಿಕ ಮಹಾಸಭೆಯಲ್ಲಿ ಹೇಳಿದ್ದಾರೆ.

ಮುಕೇಶ್ ಅವರ ಪತ್ನಿ ನೀತಾ ಅಂಬಾನಿ ಅವರು ಆಡಳಿತ ಮಂಡಳಿಯಲ್ಲಿನ ಸ್ಥಾನ ತ್ಯಜಿಸಲಿದ್ದಾರೆ. ಅವರು ರಿಲಯನ್ಸ್ ಪ್ರತಿಷ್ಠಾನದ ಅಧ್ಯಕ್ಷೆಯಾಗಿರಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries