ಕುಂಬಳೆ: ಕಾಸರಗೋಡು ಕೃಷಿಕರ ಮಾರ್ಕೆಟಿಂಗ್ ಸೊಸೈಟಿಯ ಪೆರ್ಮುದೆ ಶಾಖೆಯಲ್ಲಿ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಕೊಕ್ಕೋ ಗಿಡಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಅಧ್ಯಕ್ಷತೆಯಲ್ಲಿ ನಾರಾಯಣ ಭಟ್ ಮರುವಳ ಅವರಿಗೆ ಗಿಡ ಹಸ್ತಾಂತರಿಸಲಾಯಿತು. ಹಿರಿಯ ಕೃಷಿಕ, ಅಂಗಡಿಮೊಗರು ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಮ ಭಟ್ ಶುಭಾಶಂಸನೆಗೈದರು. ರಾಮಪ್ರಕಾಶ್, ಕೃಷ್ಣಕಿಶೋರ್, ಕೃಷಿಕರು ಉಪಸ್ಥಿತರಿದ್ದರು. ಕಾಸರಗೋಡು ಕೃಷಿಕರ ಮಾರ್ಕೆಟಿಂಗ್ ಸೊಸೈಟಿಯ ನೀರ್ಚಾಲು ಪ್ರಧಾನ ಕಚೇರಿಯ ಕಾರ್ಯದರ್ಶಿ ಅಪ್ಪಣ್ಣ ಬಿ.ಎಸ್. ಸ್ವಾಗತಿಸಿ, ಪೆರ್ಮುದೆ ಶಾಖೆಯ ಪ್ರಬಂಧಕ ಕೃಷ್ಣ ಪಳ್ಳತ್ತಡ್ಕ ವಂದಿಸಿದರು. ಆಸಕ್ತ ಕೃಷಿಕರಿಗೆ ಗಿಡಗಳ ಅವಶ್ಯಕತೆಯಿದ್ದಲ್ಲಿ ಪೆರ್ಮುದೆ ಶಾಖೆಯನ್ನು ಸಂದರ್ಶಿಸಲು ಸಂಬಂಧಪಟ್ಟವರು ತಿಳಿಸಿದ್ದಾರೆ.