ಕಾಸರಗೋಡು : ವಿದ್ಯಾನಗರ ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ಘಟಕ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್ ನ ಸಹಯೋಗದೊಂದಿಗೆ ಚಂದ್ರಗಿರಿ ಕೋಟೆಯನ್ನು ಸ್ವಚ್ಛಗೊಳಿಸುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ಕಾಸರಗೋಡು ಜಿಲ್ಲೆಯ ಪ್ರಮುಖ ಕೋಟೆಗಳಲ್ಲಿ ಒಂದಾದ ಚಂದ್ರಗಿರಿ ಕೋಟೆಯು ಬೇಕಲ ಕೋಟೆಯಂತೆಯೇ ಪಾರಂಪರಿಕ ಸೌಂದರ್ಯ, ಅನನ್ಯತೆಯನ್ನು ಹೊಂದಿದ್ದು, ಅದನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಪ್ರೇಕ್ಷಣೀಯ ತಾಣವಾಗಿ ಪ್ರಚಾರಪಡಿಸುವ ಉದ್ದೇಶದಿಂದ ಚಂದ್ರಗಿರಿ ಕೋಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಆರ್ಕಿಯೋಲಾಜಿ ವಿಭಾಗದ ಸ್ಟಾಫ್ ಅನ್ವರ್ ಮತ್ತು ಮಧುಸೂದನ ಅವರು ಪಾಲ್ಗೊಂಡಿದ್ದರು. ಸರ್ಕಾರಿ ಕಾಲೇಜು ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಡಾ.ಆಶಲತಾ ಚೇವಾರ್, ಆಸಿಫ್ ಇಕ್ಬಾಲ್ ಕಾಕಶ್ಶೇರಿ, ಎನ್ನೆಸ್ಸೆಸ್ ಸೆಕ್ರೆಟರಿಗಳಾದ ರೇವತಿ.ಪಿ, ಸ್ಮಿತಾ, ಸೃಷ್ಟಿ.ಬಿ, ಮಹಿರಾ ಬೇಗಂ, ಸಾತ್ವಿಕ್ ಚಂದ್ರನ್.ಪಿ, ಅಭಿಜಿತ್. ಎ, ರಾಹುಲ್ ರಾಜ್ ಎಂ.ಆರ್ ಕಾರ್ಯಕ್ರಮಕ್ಕೆ ಶುಚೀಕರಣ ಕಾರ್ಯಗಳಿಗೆ ನೇತೃತ್ವ ನೀಡಿದರು.