HEALTH TIPS

ಅಡಕೆಯ ಹಳದಿ ಎಲೆ ರೋಗ ನಿರೋಧಕ ತಳಿ ಅಭಿವೃದ್ಧಿ: ಕಾಸರಗೋಡು ಸಿಪಿಸಿಆರ್‍ಐ ವಿಜ್ಞಾನಿಗಳಿಂದ ಮುಂದುವರಿದ ಪ್ರಯತ್ನ

 

            ಕಾಸರಗೋಡು: ಅಡಕೆಯ ಹಳದಿ ಎಲೆ ರೋಗ ನಿರೋಧಕ ತಳಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಟಿಶ್ಯೂ ಕಲ್ಚರ್ ಗಿಡಗಳ ತಯಾರಿಯಲ್ಲಿ ನಿರತರಾಗಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ) ವಿಜ್ಞಾನಿಗಳ ಶ್ರಮ ಮತ್ತಷ್ಟು ವೇಗ ಪಡೆದುಕೊಳ್ಳಲಾರಂಭಿಸಿದೆ.


             ವಿವಿಧ ಟಿಶ್ಯೂ ಕಲ್ಚರ್ ತಳಿ ಅಭಿವೃದ್ಧಿಯಲ್ಲಿ ಈಗಾಗಲೇ ಯಶಸ್ಸುಕಂಡುಕೊಂಡಿರುವ ವಿಜ್ಞಾನಿಗಳು, ಪ್ರಸಕ್ತ ಅಡಕೆ ಹಳದಿ ಎಲೆ ರೋಗ ನಿರೋಧಕ ಟಿಶ್ಯೂ ಕಲ್ಚರ್ ತಳಿಯನ್ನು ಅಭಿವೃದ್ಧಿಪಡಿಸುವ ಅತ್ಯಂತ ಸವಾಲಿನ ಹಾದಿಯಲ್ಲಿ ಮುಂದುವರಿಯುತ್ತಿದ್ದಾರೆ. ಟಿಶ್ಯೂ ಕಲ್ಚರ್ ತಳಿಯ ಅಭಿವೃದ್ಧಿ ಕಾರ್ಯ ಸಿಪಿಸಿಆರ್‍ಐನ ಕಾಸರಗೋಡು ಕೇಂದ್ರ ಕೇಂದ್ರ ಕಚೇರಿಯ ಪ್ರಯೋಗಶಾಲೆಯಲ್ಲಿ ಪ್ರಗತಿಯ ಹಂತದಲ್ಲಿದೆ. ಇದಕ್ಕಾಗಿ ಸಿಪಿಸಿಆರ್‍ಐ ವಿಜ್ಞಾನಿಗಳ ತಂಡವೊಂದು ಹಗಲಿರುಳು ಶ್ರಮಿಸುತ್ತಿದೆ. ಈ ಪ್ರಯತ್ನ ಕಳೆದ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ಅತ್ಯಂತ ಸವಾಲಿನ ಹಾಗೂ ಕಠಿಣ ಪರಿಶ್ರಮದ ಇಂತಹ ಯೋಜನೆಯೊಂದನ್ನು ಆರಂಭಿಸುವ ಬಗ್ಗೆ ಸಿಪಿಸಿಆರ್‍ಐ ಎರಡು ವರ್ಷಗಳ ಹಿಂದೆಯೇ ಕೃಷಿಕರಿಗೆ ಸೂಚನೆ ನೀಡಿತ್ತು. ನಂತರದ ದಿನಗಳಲ್ಲಿ ಈ ಪ್ರಯೋಗವನ್ನು ತಪಸ್ಸಿನಂತೆ ಕೈಗೊಳ್ಳಲಾರಂಭಿಸಿದೆ.


                         ಹಾಟ್‍ಸ್ಪಾಟ್ ಪ್ರದೇಶದಿಂದ ಆಯ್ಕೆ:

               ಅಡಕೆಯ ಹಳದಿ ಎಲೆ ರೋಗ ನಿರೋಧಕ ತಳಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಟಿಶ್ಯೂ ಕಲ್ಚರ್ ಗಿಡಗಳ ತಯಾರಿಗೆ ಯೋಜನೆಯಿರಿಸಿದ ಅಧಿಕಾರಿಗಳ ತಂಡ ರೋಗಪೀಡಿತ ವಲಯದ ಹಾಟ್‍ಸ್ಪಾಟ್ ಪ್ರದೇಶಗಳಾದ ಶೃಂಗೇರಿ, ಸುಳ್ಯದ ಸಂಪಾಜೆ,ಅರಂತೋಡು, ಚೆಂಬು ಮುಂತಾದೆಡೆಯಿಂದ ಅಡಕೆ ತೋಟಗಳಿಂದ ರೋಗಬಾಧಿತವಾಗದ ಮರದ ಎಳೆಯ ಹಿಂಗಾರ ಸಂಗ್ರಹಿಸಿ, ಇದನ್ನು ಕಾಸರಗೋಡು ಸಿಪಿಸಿಆರ್‍ಐ ಕೇಂದ್ರದ ಪ್ರಯೋಗಶಾಲೆಗೆ ತಂದು ಟಿಶ್ಯೂ ಕಲ್ಚರ್ ಗಿಡಗಳ ಅಭಿವೃದ್ಧಿಯ ಮಹತ್ವದ ಸಾಧನೆಗೆ ಮುಂದಡಿಯಿರಿಸಿದ್ದರು. ಇದರ ಬೆಳವಣಿಗೆಯ ಪ್ರತಿಯೊಂದು ಹಂತವನ್ನೂ ಅತ್ಯಂತ ಸೂಕ್ಷ್ಮವಾಗಿ ನಿರೀಕ್ಷಿಸಿಕೊಂಡು ಬರುತ್ತಿದ್ದಾರೆ. ಪ್ರಯೋಗಶಾಲೆಯಲ್ಲಿ ಈಗಾಗಲೇ ಗಿಡದ ಒಂದು ಹಂತ ಸಿದ್ಧವಾಗುತ್ತಿದ್ದು, ಇದಕ್ಕೆ ಬೇರುಗಳು ಹುಟ್ಟಿಕೊಳ್ಳುವ ಹಂತಕ್ಕಾಗಿ ವಿಜ್ಞಾನಿಗಳು ಕಾಯುತ್ತಿದ್ದಾರೆ. ಎಲ್ಲಾ ಮರಗಳ ಹಿಂಗಾರ ಟಿಶ್ಯೂ ಕಲ್ಚರ್ ಮಾದರಿಯಲ್ಲಿ ಒಂದೇ ವೇಗದಲ್ಲಿ ಬೆಳೆಯಲು ಸಾಧ್ಯವಿಲ್ಲದ ಕಾರಣ, ಇದಕ್ಕೆ ಸಾಕಷ್ಟು ಮಾದರಿಯನ್ನು ಸಂಗ್ರಹಿಸಬೇಕಾಗುತ್ತದೆ. ಜತೆಗೆ ಪ್ರತಿ ಹಂತವನ್ನೂ ಬಲು ಎಚ್ಚರಿಕೆಯಿಂದ ನಿರೀಕ್ಷಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಟಿಶ್ಯೂ ಕಲ್ಚರ್ ಗಿಡಗಳು ತಯಾರಾದರೂ, ಇದರ ಬೆಳವಣಿಗೆ ಸೇರಿದಂತೆಸಾಧಕ, ಬಾಧಕಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ ನಂತರವಷ್ಟೆ ಕೃಷಿಯೋಗ್ಯ ಗಿಡಗಳು ಲಭಿಸಲು ಸಾಧ್ಯ. ಈ ಬಗ್ಗೆ ಧನಾತ್ಮಕ ನಿರೀಕ್ಷೆಯನ್ನಿರಿಸಿಕೊಳ್ಳಲಾಗಿದೆ ಎಂಬದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries