ತಿರುವನಂತಪುರ: ಕುಡಿದ ಅಮಲಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತನನ್ನು ಹೊಡೆದು ಕೊಂದಿರುವ ಘಟನೆ ಕೇರಳದ ಮಯ್ಯಿಲ್ ಗ್ರಾಮದಲ್ಲಿ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರ: ಕುಡಿದ ಅಮಲಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತನನ್ನು ಹೊಡೆದು ಕೊಂದಿರುವ ಘಟನೆ ಕೇರಳದ ಮಯ್ಯಿಲ್ ಗ್ರಾಮದಲ್ಲಿ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಯ್ಯಿಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ದಿನೇಶನ್ (54), ತಮ್ಮ ಸ್ನೇಹಿತ ಸಜೀವನ್ ಎಂಬುವವರನ್ನು ಹೊಡೆದು ಕೊಲೆಗೈದಿದ್ದಾರೆ.
ಸಜೀವನ್ ರಜೆ ಮೇಲೆ ಸ್ನೇಹಿತ ದಿನೇಶನ ಮನೆಗೆ ಬಂದಿದ್ದು, ಇಬ್ಬರು ಪಾನಮತ್ತರಾಗಿದ್ದರು. ಇದೇ ವೇಳೆ ಇಬ್ಬರು ಜಗಳವಾಡಿಕೊಂಡಿದ್ದು, ದಿನೇಶನ್ ಅವರು ಸೌದೆ ತುಂಡನ್ನು ತೆಗೆದುಕೊಂಡು ಸಜೀವನ್‌ನ ತಲೆಗೆ ಹೊಡೆದಿದ್ದಾನೆ. ಸಜೀವನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.