ಒಟ್ಟಪಾಲಂ: ಗಣಪತಿಯೇ ಮೊದಲ ಅವತಾರವಾಗಿದ್ದು, ದೇವರ ನಾಡು ಕೇರಳದಲ್ಲಿ ಗಣಪತಿಗೆ ಅವಮಾನ ಮಾಡಿರುವುದು ಬೇಸರ ತಂದಿದೆ ಎಂದು ಕೊಲ್ಲೂರು ಶ್ರೀಮುಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅಡಿಗ ಖೇದ ವ್ಯಕ್ತಪಡಿಸಿರುವರು.
ಒಟ್ಟಪಾಲಂನಲ್ಲಿ ನಿನ್ನೆ ನಡೆದ ಗಣೇಶ ಹಬ್ಬದಲ್ಲಿ ಅವರು ಮಾತನಾಡಿದರು.
ಗಣೇಶೋತ್ಸವವನ್ನು ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕನ್ ಅವರು ಪ್ರಾರಂಭಿಸಿದರು. ಹಿಂದೂಗಳ ಏಕತೆಗಾಗಿ ಈ ಹಬ್ಬವನ್ನು ಪ್ರಾರಂಭಿಸಲಾಯಿತು. ಕೇರಳದ ಎಲ್ಲಾ ಹಿಂದೂಗಳ ಮನೆಗಳಲ್ಲಿ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಸುಬ್ರಹ್ಮಣ್ಯ ಅಡಿಗ ತಿಳಿಸಿದರು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಗಣೇಶ ಚೈತನ್ಯ ಇರುತ್ತದೆ. ಗಣಪತಿಯನ್ನು ಅವಮಾನಿಸುವವರನ್ನು ಪ್ರತಿ ವ್ಯಕ್ತಿಯೂ ವಿರೋಧಿಸುವಂತಿರಬೇಕು ಎಂದು ಅವರು ಕರೆನೀಡಿದರು.
ನಮ್ಮ ಆರಾಧನಾ ಮೂರ್ತಿಗಳಿಗೆ ಅಪಹಾಸ್ಯ ಮಾಡುವವರಿಗೆ ಉತ್ತರ ನೀಡಬೇಕು. ನೀವು ಉತ್ಸಾಹದಿಂದ ಪ್ರತಿಕ್ರಿಯಿಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ನಾವು ಉಳಿಸುವುದು ಮಿಥ್ಯೆ ಮಾತ್ರ. ತಲೆಮಾರುಗಳ ಸಂಸ್ಕøತಿ ಕಣ್ಮರೆಯಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಗಣೇಶ ಚೈತನ್ಯ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ದೇವರನ್ನು ಅವಮಾನಿಸುವವರನ್ನು ಯಾವ ಬೆಲೆ ನೀಡಿಯಾದರೂ ಎದುರಿಸುವ ಧೀಶಕ್ತಿ ಬೆಳೆಸಬೇಕು ಎಂದಿರುವರು.