ಕೋಝಿಕ್ಕೋಡ್: ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯಲ್ಲಿ ಕತ್ತರಿ ಸಿಲುಕಿದ ಪ್ರಕರಣದಲ್ಲಿ ಜಿಲ್ಲಾ ವೈದ್ಯಕೀಯ ಮಂಡಳಿಯ ನಿರ್ಧಾರದ ವಿರುದ್ಧ ಪೋಲೀಸರು ಇಂದು ಮೇಲ್ಮನವಿ ಸಲ್ಲಿಸಲಾಗಿದೆ.
ರಾಜ್ಯ ಮಟ್ಟದ ಮೇಲ್ಮನವಿ ಸಮಿತಿಗೆ ಮನವಿ ಸಲ್ಲಿಸಲಾಗುವುದು. ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಶಸ್ತ್ರ ಚಿಕಿತ್ಸೆ ವೇಳೆ ಶಸ್ತ್ರಚಿಕಿತ್ಸಾ ಉಪಕರಣ ಹೊಟ್ಟೆಯಲ್ಲಿ ಸಿಲುಕಿಕೊಂಡಿತ್ತು ಎಂಬ ಪೆÇಲೀಸರ ಪತ್ತೆಯನ್ನು ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿ ತಿರಸ್ಕರಿಸಿತ್ತು.
ಇದರೊಂದಿಗೆ ಮೇಲ್ಮನವಿಯನ್ನು ಮುಂದುವರಿಸುವ ನಿರ್ಧಾರಕ್ಕೆ ತನಿಖಾ ತಂಡ ಬಂದಿದೆ. ಮೇಲ್ಮನವಿ ಪ್ರಾಧಿಕಾರದ ನಿರ್ಧಾರ ವ್ಯತಿರಿಕ್ತವಾಗಿದ್ದರೂ ತನಿಖಾ ತಂಡವು ವಿಚಾರಣೆ ಮುಂದುವರಿಸಬಹುದು ಎಂದು ಪೆÇಲೀಸರು ತಿಳಿಸಿದ್ದಾರೆ. ಸದ್ಯ ಹರ್ಷಿನಾ ನೀಡಿದ ದೂರಿನ ಮೇರೆಗೆ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಎಸಿಪಿ ನೇತೃತ್ವದ ತಂಡ ತನಿಖೆ ಮುಂದುವರೆಸಿದೆ.
ಪೋಲೀಸರ ವರದಿಯನ್ನು ತಿರಸ್ಕರಿಸಿದ ವೈದ್ಯಕೀಯ ಮಂಡಳಿಯ ಕ್ರಮದ ವಿರುದ್ಧ ಹರ್ಷಿನಾ ಪ್ರತಿಭಟನೆ ನಡೆಸಿದರು. ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸಿದ ಹರ್ಷಿನಾ ಅವರನ್ನು ಪೋಲೀಸರು ಬಲವಂತವಾಗಿ ಬಂಧಿಸಿ ಕರೆದೊಯ್ದರು. ಹರ್ಷನಾಗೆ ನ್ಯಾಯ ದೊರಕಿಸಿಕೊಡುವುದಾಗಿ ಆರೋಗ್ಯ ಸಚಿವರು ನಿನ್ನೆ ವಿಧಾನಸಭೆಯಲ್ಲಿ ಹೇಳಿದ್ದರು. ಇದಾದ ಬಳಿಕ ವೈದ್ಯಕೀಯ ಮಂಡಳಿ ವರದಿಯನ್ನು ತಿರಸ್ಕರಿಸಿತ್ತು. ನ್ಯಾಯಕ್ಕಾಗಿ ಹರ್ಷಿನಾ ವೈದ್ಯಕೀಯ ಕಾಲೇಜು ಎದುರು ನಡೆಸುತ್ತಿರುವ ಧರಣಿ ಇಂದಿಗೆ 85ನೇ ದಿನವನ್ನು ದಾಟಿದೆ.