ಕಾಸರಗೋಡು: ರಾಜ್ಯ ಸರ್ಕಾರದ ಸಂಸ್ಥೆ ಸಿ-ಡಿಟ್ ವತಿಯಿಂದ ಎಸ್ಸೆಸೆಲ್ಸಿ, ಪ್ಲಸ್-ಟು ಉತ್ತೀರ್ಣರಾದವರಿಗೆ ವೃತ್ತಿಪರ ಕಂಪ್ಯೂಟರ್ ಕೋರ್ಸ್ ಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕಂಪ್ಯೂಟರೈಸ್ಡ್ ಆಫೀಸ್ ಮ್ಯಾನೇಜ್ಮೆಂಟ್, ಡಾಟಾ ಎಂಟ್ರಿ, ಡಿ.ಟಿ.ಪಿ, ಮಲ್ಟಿ ಮೀಡಿಯಾ, ಕಂಪ್ಯೂಟರ್ ಮೀಡಿಯ, ಕಾಡ್ (ಸಿ.ಸಿ.ಎ.ಡಿ.), ಹಾರ್ಡ್ ವೇರ್- ನೆಟ್ ವಕಿರ್ಂಗ್, ಫೈನಾನ್ಶಿಯಲ್ ಮ್ಯಾನೇಜ್‍ಮೆಂಟ್ ಸೇರಿದಂತೆ ವಿವಿಧ ಸರ್ಟಿಫಿಕೇಟ್, ಡಿಪೆÇ್ಲೀಮ, ಪಿಜಿ ಡಿಪೆÇ್ಲೀಮ ಕೋರ್ಸ್‍ಗಳಿಗೆ ಸಿ-ಡಿಟ್‍ನ ಮಾನ್ಯತೆ ಪಡೆದ ಕಲಿಕಾ ಕೇಂದ್ರಗಳ ಮೂಲಕ ತರಬೇತಿ ನೀಡಲಾಗುವುದು. ಕೇಂದ್ರ-ಕೇರಳ ಸರ್ಕಾರ ಯಾ ಸಾರ್ವಜನಿಕ ವಲಯ ಸಂಸ್ಥೆಗಳ ಕಾನೂನಿಗೆ ಅನ್ವಯವಾಗಿ ಕೇರಳ ಪಿ.ಎಸ್.ಸಿ ಅನುಮೋದಿಸಿದ ಕೋರ್ಸುಗಳಲ್ಲಿ ಕೇರಳದ ಎಲ್ಲಾ ಜಿಲ್ಲೆಗಳಲ್ಲಿಯೂ ಕಲಿಯಲು ಅವಕಾಶವಿದೆ. ಎಸ್.ಸಿ-ಎಸ್.ಟಿ ಪಂಗಡದವರಿಗೆ, ಆದ್ಯತೆಯ ರೇಷನ್‍ಕಾರ್ಡ್ ವಿಭಾಗಗಳಿಗೆ ಶೇ. 25 ಶುಲ್ಕ ರಿಯಾಯಿತಿ ಇರಲಿದೆ. ಕೋರ್ಸುಗಳು, ಜಿಲ್ಲಾಮಟ್ಟದ ಕಲಿಕಾ ಕೇಂದ್ರಗಳ ಬಗ್ಗೆ ಅರಿಯಲು ವೆಬ್‍ಸೈಟ್ www.tet.cdit.org ಸಂದರ್ಶಿಸಬಹುದಾಗಿದೆ. ಆಗಸ್ಟ್ 26 ರಂದು ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0471 2321360, 0471 2322100, 9895889892)ಸಂಪರ್ಕಿಸುವಂತೆ ಪ್ರಟಕಣೆ ತಿಳಿಸಿದೆ.