ಹಾಲು ಉಕ್ಕದ ಮನೆಗಳು ಬಹುಷಃ ಎಲ್ಲೂ ಇರದು. ಎಷ್ಟು ಜಾಗ್ರತೆ ವಹಿಸಿದರೂ ಕಣ್ತಪ್ಪಿ ಹಾಲು ಉಕ್ಕಿ ಕೆಳಗೆ ಬೀಳದಿರುವುದು ಕಡಿಮೆ. ಹಾಲು ಕುದಿದಾಗಲೆಲ್ಲ ಮತ್ತೆ ಹೀಗಾಗಲು ಬಿಡುವುದಿಲ್ಲ ಎಂದು ಮನಃಪೂರ್ವಕ ಪ್ರತಿಜ್ಞೆ ಮಾಡಿದರೂ ಮತ್ತೆ ಹಾಲು ಉಕ್ಕುತ್ತದೆ.
ಹಾಲನ್ನು ಚಮಚದಿಂದ ಚೆನ್ನಾಗಿ ಕಲಕಿ ಕುದಿಯುತ್ತಿರುವಾಗ ಕಣ್ಣು ಮಿಟುಕಿಸಿದರೆ ಸಾಕು ಗ್ಯಾಸ್ ಸ್ಟವ್ ಗೆ ಹಾಲು ಬೀಳುತ್ತದೆ. ಈ ತಪ್ಪು ಮರುಕಳಿಸದಂತೆ ತಡೆಯಲು ಕೆಲವು ತಂತ್ರಗಳನ್ನು ನೋಡೋಣ.
ಗಮನ ಕಳೆದುಕೊಳ್ಳಬೇಡಿ
ಹಾಲು ಕುದಿಸುವಾಗ ಬೇರೆ ಕೆಲಸದಲ್ಲಿ ತೊಡಗಬೇಡಿ. ಹಾಲು ಕುದಿಸಿದ ನಂತರವೇ ಇತರ ಕೆಲಸಗಳನ್ನು ಮಾಡಿ. ಎಂದಿಗೂ ಅಡಿಗೆ ಮನೆಯಿಂದ ಹೊರಗೆ ತೆರಳಬೇಡಿ.
ಉಪು:್ಪ
ಒಂದು ಚಿಟಿಕೆ ಉಪ್ಪಿನೊಂದಿಗೆ ಹಾಲು ಕುದಿಸುವುದು ಅದನ್ನು ಕುದಿದು ಉಕ್ಕದಂತೆ ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಮಡಕೆ:
ಹಾಲು ಕುದಿಯುವ ಪಾತ್ರೆಯ ಕೆಳಭಾಗವು ತುಂಬಾ ದಪ್ಪವಾಗಿದ್ದರೆ ಉತ್ತಮ. ಮತ್ತು ಉತ್ತಮ ಗಾತ್ರದ ಮಡಕೆಯನ್ನು ಆರಿಸುವುದರಿಂದ ಹಾಲು ಕುದಿಯುವುದನ್ನು ತಡೆಯಲು ಸಹಾಯ ಮಾಡುತ್ತದೆ. ಹಾಲನ್ನು ಕುದಿಸಲು ಅಗಲವಾದ ಪಾತ್ರೆಯನ್ನು ಬಳಸಿ.
ಚಮಚ:
ಹಾಲು ಕುದಿಸಲು ಬಳಸುವ ಚಮಚ ಮರದಿಂದ ಮಾಡಿದರೆ ಉತ್ತಮ. ಮಡಕೆಗೆ ಅಡ್ಡವಾಗಿ ಇಟ್ಟರೆ ಸ್ವಲ್ಪ ಮಟ್ಟಿಗೆ ಹಾಲು ಕುದಿಯುವುದನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ.
ಬೇರೆ ಐಡಿಯಾಗಳಿದ್ದರೆ ನಮಗೂ ನೀವು ಹೇಳಬಹುದು.