ಕಾಸರಗೋಡು: ನಕಾರಾತ್ಮಕ ಅಂಶಗಳನ್ನು ಮೀರಿ ನಿಂತಾಗ ಮಾತ್ರ ನೈಜ ಸಾಧಕರಾಗಲು ಸಾಧ್ಯ ಎಂದು ಚಿತ್ರನಟ, ರಂಗಕರ್ಮಿ ಕಾಸರಗೋಡು ಚಿನ್ನಾ ತಿಳಿಸಿದ್ದಾರೆ.
ಅವರು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ-ಸಂಶೋಧನ ವಿಭಾಗ ಮತ್ತು ಕಾಸರಗೋಡು ಕನ್ನಡ ಬಳಗ ಆಯೋಜಿಸಿದ್ದ ಸ್ಮøತಿ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಅಗಲಿದ ಅಧ್ಯಾಪಕರ ಕುರಿತು ಸ್ಮೃತಿ ಉಪನ್ಯಾಸ ನೀಡಿ ಮಾತನಾಡಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗ ಸಕಾರಾತ್ಮಕ ಚಿಂತನೆಯ ಗುರುಗಳನ್ನು ನಾಡಿಗೆ ನೀಡಿದೆ. ಈ ಗುರುಗಳು ತಮ್ಮ ಸಾಹಿತ್ಯಕ, ಸಾಂಸ್ಕøತಿಕ, ಸಾಮಾಜಿಕ ಮಾರ್ಗದರ್ಶನದ ಮೂಲಕ ಹಲವಾರು ಶಿಷ್ಯವೃಂದವನ್ನು ಬೆಳೆಸಿದ್ದಾರೆ ಎಂದು ನುಡಿದರು.
ಈ ಸಂದರ್ಭ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಪೆÇ್ರ. ಪಿ. ಸುಬ್ರಾಯ ಭಟ್, ಪೆÇ್ರ. ಬಿ. ಕೆ ತಿಮ್ಮಪ್ಪ, ಪೆÇ್ರ. ಬಿ. ಪದ್ಮನಾಭ, ಪೆÇ್ರ. ವೇಣುಗೋಪಾಲ ಕಾಸರಗೋಡು ಮತ್ತು ಕಿರಿಯರಾದ ಪೆÇ್ರ. ದಿನೇಶ್ ಕುಮಾರ್ ಅವರ ಬದುಕಿನ ಪುಟಗಳ ಕಡೆಗೆ ಕಾಸರಗೋಡು ಚಿನ್ನಾ ಬೆಳಕು ಚೆಲ್ಲಿದರು
ಸಮಾರಂಭದಲ್ಲಿ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ರಾಜನೀತಿಯ ಪರಿಭಾಷೆ ಕುರಿತು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ದ ಪರೀಕ್ಷಾಂಗ ಕುಲಸಚಿವ ಡಾ. ಎಚ್. ಜಿ. ಶ್ರೀಧರ ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಅನಂತಪದ್ಮನಾಭ ಎ. ಎಲ್. ಸಮಾರಂಭ ಉದ್ಘಾಟಿಸಿದರು. ವಿಭಾಗ ಮುಖ್ಯಸ್ಥೆ ಪೆÇ್ರ. ಸುಜಾತ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭ ದತ್ತಿನಿಧಿಯ ವಿತರಣೆ ನಡೆಯಿತು. ವಿದ್ಯಾರ್ಥಿನಿ ಜ್ಯೋತಿಕಾ ಪ್ರಾರ್ಥನೆ ಹಾಡಿದರು. ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿದರು. ಡಾ. ಬಾಲಕೃಷ್ಣ ಬಿ ಎಂ. ಹೊಸಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಡಾ . ಆಶಾಲತಾ ಸಿ.ಕೆ ವಂದಿಸಿದರು.