ಎರ್ನಾಕುಳಂ: ಹೈಕೋರ್ಟ್ ವಕೀಲ ಅಡ್ವ. ರಾಜೇಶ್ ವಿಜಯನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ಸ್ಟಾಫ್ ಅಸೋಸಿಯೇಷನ್ ಬಾರ್ ಕೌನ್ಸಿಲ್‍ಗೆ ದೂರು ಸಲ್ಲಿಸಿದೆ.
ಕೇರಳ ಹೈಕೋರ್ಟ್‍ನ ಮಹಿಳಾ ಉದ್ಯೋಗಿಗಳು ಓಣಂ ಆಚರಣೆಗಾಗಿ ಧರಿಸುವ ಬಟ್ಟೆಯ ಬಗ್ಗೆ ವಕೀಲರ ಪೇಸ್ ಬುಕ್ ಪೋಸ್ಟ್ ಮೂಲಕ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ದೂರಲಾಗಿದೆ.
ದೂರಿನ ಪ್ರಕಾರ ಅಡ್ವ.ರಾಜೇಶ್ ವಿಜಯನ್ ಅವರು ಮಹಿಳಾ ಉದ್ಯೋಗಿಗಳ ಉಡುಗೆಯನ್ನು ಅವರ ಕೆಲಸದ ಜೊತೆ ಹೋಲಿಕೆ ಮಾಡಿ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ. ಮತ್ತು ಎರಡನೇ ಫೇಸ್‍ಬುಕ್ ಪೋಸ್ಟ್‍ನಲ್ಲಿ, ಮಹಿಳಾ ಉದ್ಯೋಗಿಗಳು ದೇಹವನ್ನು ಕೀಳುಮಟ್ಟದಲ್ಲಿ ಹೇಳಲಾಗಿದೆ. ಮಹಿಳಾ ಉದ್ಯೋಗಿಗಳ ನೈತಿಕ ಸ್ಥೈರ್ಯವನ್ನು ಉಡುಗಿಸುವ ಮತ್ತು ಮಹಿಳೆಯರನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸುವುದು ವಕೀಲರ ಪ್ರಮಾಣ ವಚನದ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.