ಬದಿಯಡ್ಕ: ಯುಜಿಇಇ, ಐಐಐಟಿ ಪರೀಕ್ಷೆಯಲ್ಲಿ ದೇಶೀಯಮಟ್ಟದಲ್ಲಿ ಮೊದಲ ರ್ಯಾಂಕ್ ಪಡೆದ ಯಶಸ್ವಿನಿಯನ್ನು ಗೋಕರ್ಣದ ಅಶೋಕೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಆಶೀರ್ವದಿಸಿ ಮಂತ್ರಾಕ್ಷತೆಯನ್ನಿತ್ತರು. ಯಶಸ್ವಿನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಈಕೆಯ ಸಾಧನೆ ಶ್ರೀಮಠಕ್ಕೇ ಹೆಮ್ಮೆಯ ವಿಚಾರ. ಮುಂದಿನ ವಿದ್ಯಾಭ್ಯಾಸ ಸುಗಮವಾಗಲಿ ಎಂದು ಹರಸಿದರು. ಹೆತ್ತವರಾದ ವೇದಮೂರ್ತಿ ಕಿಳಿಂಗಾರು ಶಿವಶಂಕರ ಭಟ್ ದಂಪತಿಗಳು ಜೊತೆಗಿದ್ದರು. ಯಶಸ್ವಿನಿ ಮುಳ್ಳೇರಿಯ ಹವ್ಯಕ ಮಂಡಲದ ನೀರ್ಚಾಲು ವಲಯದ ವಿದ್ಯಾರ್ಥಿನಿಯಾಗಿದ್ದಾಳೆ.