ಕಣ್ಣೂರು: ಕಣ್ಣೂರು ಕೀರ್ಪಳ್ಳಿ ವಿಯೆಟ್ನಾಂ ಕಾಲನಿಗೆ ಶಸ್ತ್ರಸಜ್ಜಿತ ನಕ್ಸಲ್ ತಂಡವೊಂದು ಆಗಮಿಸಿರುವುದಾಗಿ ತಿಳಿದುಬಂದಿದೆ. ಮೂವರು ಮಹಿಳೆಯರೂ ಸೇರಿದಂತೆ ಹನ್ನೊಂದು ಮಂದಿಯ ತಂಡ ವಿಯೆಟ್ನಾಂ ಕಾಲೋನಿಗೆ ಆಗಮಿಸಿರುವುದಾಗಿ ಹೇಳಲಾಗಿದೆÉ.
ಅವರು ವಿಯೆಟ್ನಾಂ ಮಾರುಕಟ್ಟೆಯಲ್ಲಿ ಮೆರವಣ|ಇಗೆ ನಡೆಸಿದರು ಮತ್ತು ``ಆದಿವಾಸಿಗಳಿಗಾಗಿ ಅರಳಮ್ ಫಾರ್ಮ್" ಎಂಬ ಪೋಸ್ಟರ್ ಅನ್ನು ಪ್ರದರ್ಶಿಸಿದ್ದರು. ಅವರಿಗಾಗಿ ಪೋಲೀಸರು ಹುಡುಕಾಟ ಆರಂಭಿಸಿದ್ದಾರೆ. ಎರಡು ವಾರಗಳ ಹಿಂದೆ ಐವರು ನಕ್ಸಲ್ ತಂಡ ಕಣ್ಣೂರಿನ ಅಯ್ಯನ್ ಕುಂಕುನ್ನಿನ ವಾಣಿಯಪಾರಕ್ಕೆ ಆಗಮಿಸಿತ್ತು.
ಒಂದು ತಿಂಗಳ ಹಿಂದೆ, ನಕ್ಸಲ್ ಗುಂಪು ಅರಳಮ್ ಕಿರ್ಪಳ್ಳಿಯಲ್ಲಿ ವಿಯೆಟ್ನಾಂಗೆ ತಲುಪಿತು ಮತ್ತು ಅಯ್ಯನ್ ಕುನ್ನಿನಲ್ಲಿರುವ ಬಾರಾಪೋಲ್ ಮಿನಿ ಜಲವಿದ್ಯುತ್ ಯೋಜನೆಯನ್ನು ಕೆಡವುವುದಾಗಿ ಬೆದರಿಕೆ ಹಾಕಿತ್ತು. ಇದರ ಬೆನ್ನಲ್ಲೇ ಬಾರಾಪೋಲ್‍ಗೆ ಭದ್ರತಾ ವ್ಯವಸ್ಥೆ ಬಿಗುಗೊಳಿಸಿ ಕಣ್ಗಾವಲು ವ್ಯಾಪಕಗೊಳಿಸಿರುವ ಮಧ್ಯೆ ವಾರಗಳ ಅಂತರದ ನಂತರ ಮತ್ತೆ ನಕ್ಸಲ್ ತಂಡ ಆಗಮಿಸಿರುವುದು ಆತಂಕಮೂಡಿಸಿದೆ.