ನವದೆಹಲಿ: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿದ್ದ ಕೋವಿಡ್ ದೃಢ ಪ್ರಕರಣಗಳು ಮಂಗಳವಾರ ಇಳಿಕೆಯ ಹಾದಿ ಹಿಡಿದಿದೆ. ದೇಶದಲ್ಲಿ ಹೊಸದಾಗಿ 7,633 ಪ್ರಕರಣಗಳು ದೃಢಪಟ್ಟಿವೆ.
ನವದೆಹಲಿ: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿದ್ದ ಕೋವಿಡ್ ದೃಢ ಪ್ರಕರಣಗಳು ಮಂಗಳವಾರ ಇಳಿಕೆಯ ಹಾದಿ ಹಿಡಿದಿದೆ. ದೇಶದಲ್ಲಿ ಹೊಸದಾಗಿ 7,633 ಪ್ರಕರಣಗಳು ದೃಢಪಟ್ಟಿವೆ.
ಸತತ ನಾಲ್ಕು ದಿನ 10 ಸಾವಿರಕ್ಕಿಂತ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಸೋಮವಾರ ಅದು 9,111ಕ್ಕೆ ಇಳಿಕೆಯಾಗಿತ್ತು.
ಸಾವಿನ ಸಂಖ್ಯೆಯಲ್ಲಿ ಸಹ ಇಳಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದು, ದೆಹಲಿ ಮತ್ತು ಕೇರಳದಲ್ಲಿ ತಲಾ ನಾಲ್ವರು, ಕರ್ನಾಟಕ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ತಲಾ ಒಬ್ಬರು ಕೊನೆಯುಸಿರೆಳೆದಿದ್ದಾರೆ.
ಆತಂಕದ ಸರಪಣಿ ತುಂಡರಿಸಿ: ನವದೆಹಲಿಯಲ್ಲಿ ಮಂಗಳವಾರ ನಡೆದ ಜಿ20 ಆರೋಗ್ಯ ಕ್ರಿಯಾ ಗುಂಪಿನ ಸಭೆಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ, ಕೋವಿಡ್‌ನಿಂದ ಎದುರಾಗಿರುವ ಆತಂಕದ ಸರಪಣಿಯನ್ನು ಎಲ್ಲರೂ ಒಗ್ಗಟ್ಟಿನಿಂದ ತುಂಡರಿಸುವ ಅಗತ್ಯ ಇದೆ, ಕೋವಿಡ್ ಪಿಡುಗಿನ ವಿರುದ್ಧ ದೇಶ ಮಾಡಿಕೊಂಡ ತಯಾರಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿದೆ ಎಂದರು.