ಕುಂಬಳೆ: ಸೀತಾಂಗೋಳಿ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿನ ವಾರ್ಷಿಕ ಮಹಾಸಭೆ ಕ್ಲಬ್ ಕಚೇರಿಯಲ್ಲಿ ಜರಗಿತು. ಕ್ಲಬ್ ಅಧ್ಯಕ್ಷ, ನ್ಯಾಯವಾದಿ ಥಾಮಸ್ ಡಿ'ಸೋಜಾ ಅಧ್ಯಕ್ಷತೆ ವಹಿಸಿದ್ದರು. ಸ್ವಾತಂತ್ರ್ಯ ದಿನಾಚರಣೆ ಹಾಗೂ ಓಣಂ ಮಹೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸಲಾಯಿತು.
ಈ ಸಂದರ್ಭ ಸಂಘಟನೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನ್ಯಾಯವಾದಿ ಥೋಮಸ್ ಡಿ' ಸೋಜಾ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಅಭಿಜಿತ್, ಕೋಶಾಧಿಕಾರಿಯಾಗಿ ಸುನಿಲ್ ಆಯ್ಕೆಗೊಂಡರು. ಪೃಥ್ವಿರಾಜ್ ಉಪಾಧ್ಯಕ್ಷ, ಭರತ್ ರಾಜ್ ಜತೆ ಕಾರ್ಯದರ್ಶಿ, ಶೋಭಿತ್ ಪ್ರಶಾಂತ್ ಕಲಾ ಕಾರ್ಯದರ್ಶಿ, ಮನೋಜ್ ಆಚಾರ್ಯ ಕ್ರೀಡಾ ಕಾರ್ಯದರ್ಶಿ, ರವಿ ನಾಯ್ಕಾಪು, ಅಪ್ಪಣ್ಣ, ಸತೀಶ ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕರು ಹಾಗೂ ಪ್ರಸಾದ್ ಅವರನ್ನು ಲೆಕ್ಕ ಪರಿಶೋಧಕರಾಗಿ ಆಯೆ ಮಾಡಲಾಯಿತು. ಹಿರಿಯರಾದ ನಾರಾಯಣ ಎಸ್.ಬಿ, ಮಹಾಲಿಂಗ ಬೇಳ, ಜಯಂತ ಪಾಟಾಳಿ, ನಿರಂಜನ, ರವಿ ಜೆ. ಬಿ ಅವರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ಪ್ರಸಾದ್ ಸ್ವಾಗತಿಸಿ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ರಂಜಿತ್ ಲೆಕ್ಕ ಪತ್ರ ಮಂಡಿಸಿದರು.
: ವಕೀಲ ಥಾಮಸ್ ಡಿ.ಸೋಜ.