ಮಧೂರು ಗ್ರಾಮ ಪಂಚಾಯಿತಿ ವತಿಯಿಂದ ಕೃಷಿಕರ ದಿನಾಚರಣೆ
ಮಧೂರು : ಮಧೂರು ಗ್ರಾಮ ಪಂಚಾಯಿತಿ ಹಾಗೂ ಕೃಷಿ ಭವನದ ಆಶ್ರಯದಲ್ಲಿ ಕೃಷಿಕರ ದಿನವನ್ನು ಪಂಚಯಿತಿ ಸಭಾಂಗಣದಲ್ಲಿ ಆಚರಿಸಲಾಯಿತು. ಪ್ರತಿವರ್ಷ ಸಿಂಹ ಮಾಸದ ಒಂದನೇ ದಿನವನ್ನು ಕೃಷಿಕರ ದಿನವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಸಕ ಎ. ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕೃಷಿ, ಹೈನುಗಾರಿಕೆಯಿಂದ ಜನರು ವಿಮುಖರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮುಂದಿನ ಪೀಳಿಗೆಗೆ ಕೃಷಿಯ ಮಹತ್ವ ತಿಳಿಯಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಗದೀಶ್ ಬೇರಾ (ಯುವ ರೈತ), ಗುರುವಪ್ಪ ಅಮಚಿಕರ (ಎಸ್‍ಸಿ ಕೃಷಿಕ), ಚಂದ್ರಾವತಿ (ಮಹಿಳಾ ಕೃಷಿಕೆ), ಮಹಮ್ಮದ್ (ವಿದ್ಯಾರ್ಥಿ ಕೃಷಿಕ), ರಾಮನ್ ಉದಯಗಿರಿ (ಹೈನುಗಾರರು), ಉಮೇಶ ನಾಯ್ಕ್, ಗೋಪಾಲನ್ ನಾಯರ್, ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವ ಕಮಲಾ, ಅಡ್ರು(ಕೃಷಿ ಕಾರ್ಮಿಕೆಯರು), ಲಕ್ಷ್ಮೀ ಗಟ್ಟಿ (ಹಿರಿಯ ಕೃಷಿಕೆ) ಪಟ್ಲ ತರಕಾರಿ ಕ್ಲಸ್ಟರ್, ಮಾಯಿಪ್ಪಾಡಿ ಪೆÇ್ರಸೆಸಿಂಗ್ ಕೃಷಿ ಬಳಗದವರನ್ನು ಸನ್ಮಾನಿಸಲಾಯಿತು. ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು, ಉಮೇಶ ಗಟ್ಟಿ, ಯಶೋದಾ ಎಸ್.ನಾಯ್ಕ , ಬ್ಲಾಕ್ ಪಂಚಾಯತ್ ಸದಸ್ಯರಾದ ಜಮೀಲಾ ಅಹ್ಮದ್, ಸುಕುಮಾರ ಕುದ್ರೆಪ್ಪಾಡಿ, ಕೆ.ರತೀಶ್, ಅಬ್ದುಲ್ ಜಲೀಲ್ ಎಂ.ಚೆಟ್ಟುಂಗುಯಿ, ಹಬೀಬ್ ಚೆಟ್ಟುಂಗುಯಿ, ಸಿ.ಎಚ್.ಉದಯ ಕುಮಾರ್, ಗ್ರಾ.ಪಂ.ಸದಸ್ಯರು. ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಂಕರ ಬೆಳ್ಳಿಗೆ, ಎ.ರವೀಂದ್ರನ್, ಬುಜಂಗ ಶೆಟ್ಟಿ, ರವೀಂದ್ರ ರೈ ಶಿರಿಬಾಗಿಲು, ಎಂ.ರಾಜೀವ್ ನಂಬಿಯಾರ್ ಉಪಸ್ಥಿತರಿದ್ದರು. ಮಧೂರು ಕೃಷಿ ಅಧಿಕಾರಿ ಬಿ.ಎಚ್.ನಫೀಸತ್ ಹಂಶೀನ ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ವಿ.ವಿ.ಮಧುಸೂದನನ್ ವಂದಿಸಿದರು.