ಉಪ್ಪಳ: ಕಯ್ಯಾರ್ ಡೋನ್ ಬೋಸ್ಕೊ ಎ.ಯು.ಪಿ. ಶಾಲೆಯಲ್ಲಿ ಸ್ವಾತಂತ್ರೋತ್ಸವ ದಂಗವಾಗಿ ನಡೆದ ಧ್ವಜಾರೋಹಣವನ್ನು ಶಾಲಾ ಸಂಚಾಲಕ ಫಾದರ್ ವಿಶಾಲ್ ಮೋನಿಸ್ ನೆರವೇರಿಸಿದರು. ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯ ಅವಿನಾಶ್ ಮಚಾದೊ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜುಲ್ಫಿಕರ್ ಅಲಿ, ಮಾತೆಯರ ಸಂಘದ ಅಧ್ಯಕ್ಷೆ ರೇಶ್ಮಾ ಡಿ ಸೋಜ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ’ಸೋಜ, ಕಾರ್ಯದರ್ಶಿ ಝೀನಾ ಡಿ’ಸೋಜ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಪೀಟರ್ ರೋಡ್ರಿಗಸ್ ಸ್ವಾಗತಿಸಿ, ಶ್ರೀಮತಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಕರ್ನೆಲಿಯಸ್ ಲೋಬೋ ವಂದಿಸಿದರು.