ಕುಂಬಳೆ: ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆಯಾದ ಪೊಸಡಿಗುಂಪೆಯ ಶ್ರೀ ಶಂಕರ ಧ್ಯಾನ ಮಂದಿರದ ಪರಿಸರದಲ್ಲಿ ಭಾನುವಾರ ಸಂಜೆ ವನಜೀವನ ಯಜ್ಞ ಕಾರ್ಯಕ್ರಮ ನಡೆಯಿತು.
ಗುರುವಂದನೆ, ಗೋಸ್ತುತಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಮುಳ್ಳೇರಿಯ ಹವ್ಯಕ ಮಂಡಲಾಂತರ್ಗತ ಗುಂಪೆ ವಲಯದ ಅಧ್ಯಕ್ಷ ಶಂಭು ಹೆಬ್ಬಾರ್ ಶ್ರಾವಣಕೆರೆ, ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ, ಶ್ರೀನಿಧಿ ತೆಂಕಕೆರೆ ( ಯುವ ವಿಭಾಗ),ಶ್ರೀರಾಮ ಶರ್ಮಾ ಎಡಕ್ಕಾನ ಸಹಿತ ವಲಯದ ಶಿಷ್ಯಬಂಧುಗಳು ಭಾಗವಹಿಸಿ ಪೊಸಡಿಗುಂಪೆಯ ಶಂಕರಧ್ಯಾನ ಮಂದಿರದ ಪರಿಸರದಲ್ಲಿ ಬಿಲ್ವಪತ್ರೆ, ಪಾಲಾಶ, ಶಮೀ, ಅಶೋಕ,ಹಲಸು,ಮಾವು ಸಹಿತ ಅನೇಕ ಗಿಡಗಳನ್ನು ನೆಟ್ಟು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.