ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಮೂರನೇ ವರ್ಷದ ಚಾತುರ್ಮಾಸ್ಯ ಸಮಾರಂಭದ ಸುಸಂದರ್ಭ ಆ. 12ರಂದು ಆಯೋಜಿಸಲಾಗಿದ್ದ ಖ್ಯಾತ ವೈದ್ಯ ಸಾಹಿತಿ ಡಾ. ರಮಾನಂದ ಬನಾರಿ ಅವರ 'ಸದ್ದಾಗಿಯು ಸದ್ದಾಗದ ಸದ್ದುಗಳು' ಕೃತಿ ಬಿಡುಗಡೆ ಸಮಾರಂಭವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಿರುವುದಾಗಿ ಬನಾರಿ ಯಕ್ಷಗಾನ ಕಲಾಸಂಘ ಹಾಗೂ ಜಿಲ್ಲಾ ಲೇಖಕರ ಸಂಘ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.