ಕಾಸರಗೋಡು: ಓಣಂ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭ ಕಲಬೆರಕೆ ಮದ್ಯದ ತಯಾರಿ, ಬಳಕೆ, ಮಾರಾಟ, ಕಳ್ಳಸಾಗಾಟ, ಕಲಬೆರಕೆ ಮದ್ಯದ ಸಂಗ್ರಹಣೆ ಮತ್ತು ಮಾದಕ ದ್ರವ್ಯಗಳ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಇಂದಿನಿಂದ ಅಕ್ಟೋಬರ್ 5ರವರೆಗೆ ರಾಜ್ಯದಲ್ಲಿ ವಿಶೇಷ ಆಂದೋಲನ ಜಾರಿಗೊಳಿಸಿದೆ.
ಮದ್ಯ ಮತ್ತು ಮಾದಕ ದ್ರವ್ಯ ವ್ಯಾಪಕಗೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರೂ ಕೈಜೋಡಿಸುವಂತೆ ಕೆಳಿಕೊಳ್ಳಲಾಗಿದ್ದು, ಇಂತಹ ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಾಸರಗೋಡು ಅಬಕಾರಿ ಇಲಾಖೆಗೆ ತಿಳಿಸಬಹುದಾಗಿದೆ. ಜಿಲ್ಲಾ ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ 155358 ಜಿಲ್ಲಾ ನಿಯಂತ್ರಣ ಕೊಠಡಿ 04994 256728 ಅಬಕಾರಿ ವೃತ್ತ ಕಛೇರಿ ಕಾಸರಗೋಡು 04994 255332 ಅಬಕಾರಿ ಜಾರಿ ಮತ್ತು ಆ್ಯಂಟಿ ನಾರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ ಕಾಸರಗೋಡು 04994257060, ಅಬಕಾರಿ ವೃತ್ತ ಕಛೇರಿ ಹೊಸದುರ್ಗ 04672 204125, ಅಬಕಾರಿ ವೃತ್ತ ಕಛೇರಿ ವೆಳ್ಳರಿಕುಂಡ್ 04672 245100, ಅಬಕಾರಿ ರೇಂಜ್ ಕಛೇರಿ ನೀಲೇಶ್ವರ, ಅಬಕಾರಿ ರೇಂಜ್ ಕಛೇರಿ ಹೊಸದುರ್ಗ 083672 283174 4672 204533, ಅಬಕಾರಿ ರೇಂಜ್ ಕಛೇರಿ ಕಾಸರಗೋಡು 04994 257541, ಅಬಕಾರಿ ರೇಂಜ್ ಕಛೇರಿ ಕುಂಬಳೆ 04998 213837 ,ಅಬಕಾರಿ ರೇಂಜ್ ಕಛೇರಿ ಬಂದಡ್ಕ-04994 205364 ಮತ್ತು ಅಬಕಾರಿ ರೇಂಜ್ ಕಛೇರಿ ಬದಿಯಡ್ಕ-04998 293500 ಎಂಬ ಸಂಖ್ಯೆಗಳಿಗೆ ಮಾಹಿತಿ ನೀಡಬಹುದಾಗಿದೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ಗೌಪ್ಯವಾಗಿರಿಸಲಾಗುವುದು ಎಂದು ಕಾಸರಗೋಡು ಉಪ ಅಬಕಾರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.