ಕಾಸರಗೋಡು: ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರ ವಿದ್ಯಾನಗರ ಸಿವಿಲ್‍ಸ್ಟೇಶನ್ ಸನಿಹದ ಔದ್ಯೋಗಿಕ ನಿವಾಸದಲ್ಲಿ ಓಣಂ ಆಚರಿಸಲಾಯಿತು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಓಣಂ ಆಚರಣೆಯಲ್ಲಿ ಜಿಲ್ಲಾಧಿಕಾರಿಗಳ ಪತ್ನಿ ಡಾ.ನಂದಿನಿ, ಪುತ್ರಿ ಆದ್ಯಾ ಹಾಗೂ ಕುಟುಂಬಸ್ಥರು, ನೌಕರರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ, ಅವರ ಕುಟುಂಬದವರು ಮತ್ತು ಸಹೋದ್ಯೋಗಿಗಳು ಹೂವಿನ ರಂಗೋಲಿ, ಮತ್ತು ಓಣಂ ಸದ್ಯವನ್ನು ತಯಾರಿಸುವ ಮೂಲಕ ಸಹೋದರತ್ವ ಮತ್ತು ಸಕಲ ಸಮೃದ್ಧಿಯ ಸಂಕೇತವಾಗಿರುವ ರಾಷ್ಟ್ರೀಯ ಹಬ್ಬ ಓಣಂನ್ನು ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹ್ಮದ್, ತಿರೂರು ಅಪರ ಜಿಲ್ಲಾಧಿಕಾರಿ ಸಚಿನ್ ಕುಮಾರ್ ಯಾದವ್, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ ಉಪಸ್ಥಿತರಿದ್ದರು.