ಕುಂಬಳೆ: ಕುಂಬಳೆ ಸನಿಹದ ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿ ಚಟುವಟಿಕೆ ನಡೆಸುತ್ತಿರುವ ಪ್ಲೈವುಡ್ ಕಾರ್ಖಾನೆಯ ದುರಸ್ತಿ ಕೆಲಸದ ಸಂದರ್ಭ ಕಾಂಕ್ರೀಟ್ ಸ್ಲ್ಯಾಬ್ ಏಕಾಏಕಿ ಕುಸಿದ ಪರಿಣಾಮ ಕಾರ್ಖಾನೆ ಮೇಲ್ವಿಚಾರಕ ಪಯ್ಯನ್ನೂರ್ ಕೇಳೋತ್ ನಿವಾಸಿ ಅಬ್ದುಲ್ ರಾವುಫ್(55)ಮ್ರತಪಟ್ಟಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕಾರ್ಖಾನೆ ಇಲ್ಲಿ ಚಟುವಟಿಕೆ ನಡೆಸುತ್ತಿದ್ದು, ಕಟ್ಟಡದ ನವೀಕರಣೆ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುವ ಮಧ್ಯೆ ದುರಂತ ಸಂಭವಿಸಿದೆ. ಕಾಂಕ್ರೀಟ್ ಸ್ಲ್ಯಾಬ್ ತಲೆಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಅಬ್ದುಲ್ ರಾವುಫ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವು ಸಂಭವಿಸಿದೆ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.