ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಬಂದರು ನಗರ ಗ್ವಾದಾರ್‌ನಲ್ಲಿ ಚೀನಾದ ಎಂಜಿನಿ ಯರ್‌ಗಳ ಬೆಂಗಾವಲು ವಾಹನ ಮೇಲೆ ದಾಳಿ ನಡೆಸಿದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಭಾನುವಾರ ಹತ್ಯೆಗೈದಿವೆ ಎಂದು ಸೇನೆ ತಿಳಿಸಿದೆ.
ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಬಂದರು ನಗರ ಗ್ವಾದಾರ್‌ನಲ್ಲಿ ಚೀನಾದ ಎಂಜಿನಿ ಯರ್‌ಗಳ ಬೆಂಗಾವಲು ವಾಹನ ಮೇಲೆ ದಾಳಿ ನಡೆಸಿದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಭಾನುವಾರ ಹತ್ಯೆಗೈದಿವೆ ಎಂದು ಸೇನೆ ತಿಳಿಸಿದೆ.
ಬಹು ಶತಕೋಟಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ನ ಕೇಂದ್ರ ಬಿಂದುಗಳಲ್ಲಿ ಗ್ವಾದರ್ ಒಂದಾಗಿದೆ.
ಮಿಲಿಟರಿ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಪ್ರಕಾರ, ಭಯೋತ್ಪಾದಕರು ಬೆಳಿಗ್ಗೆ 10 ಗಂಟೆಗೆ ಶಸ್ತ್ರಾಸ್ತ್ರಗಳು ಮತ್ತು ಹ್ಯಾಂಡ್ ಗ್ರೆನೇಡ್ ಬಳಸಿ ದಾಳಿ ನಡೆಸಿದರು. ತಕ್ಷಣ ಕಾರ್ಯಾಚರಣೆ ನಡೆಸಿದ ಸೇನೆ, ಯಾವುದೇ ನಾಗರಿಕರಿಗೆ ಹಾನಿಯಾಗದಂತೆ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ತಿಳಿಸಿದೆ.
ಚೀನಾದ ಎಂಜಿನಿಯರ್‌ಗಳ ಮೇಲೆ ಯಾವುದೇ ದಾಳಿ ಬಗ್ಗೆ ಉಲ್ಲೇಖಿಸಲಾಗಿಲ್ಲ.
ಬಲೂಚಿಸ್ತಾನದಲ್ಲಿ ಸಕ್ರಿಯವಾಗಿರುವ ಬಲೂಚ್ ಲಿಬರೇಶನ್ ಆರ್ಮಿ - ಮಜೀದ್ ಬ್ರಿಗೇಡ್ ಎಂಬ ಉಗ್ರ ಸಂಘಟನೆ ಈ ದಾಳಿ ಹೊಣೆ ಹೊತ್ತುಕೊಂಡಿದೆ.
'ಗ್ವಾದಾರ್‌ನಲ್ಲಿ ಚೀನಾದ ಕಾರ್ಮಿಕರ ಬೆಂಗಾವಲು ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ' ಎಂದು ಸೆನೆಟರ್ ಸರ್ಫರಾಜ್ ಬುಗ್ತಿ ಅವರು ಎಕ್ಸ್‌ನಲ್ಲಿ (ಟ್ವಿಟರ್) ಹೇಳಿದ್ದಾರೆ.