ಕುತೂಹಲಭರಿತ ಸ್ಟಿಕ್ಕರ್‍ಗಳನ್ನು ಸಿದ್ದಪಡಿಸಿ ಅವುಗಳನ್ನು ವಾಟ್ಸ್ ಆಫ್ ನಲ್ಲಿ ಸ್ನೇಹಿತರು ಮತ್ತು ಗುಂಪುಗಳೊಂದಿಗೆ ಹಂಚಿಕೊಳ್ಳುವುದು ಇಂದಿನ ನಮ್ಮ ಬಹುದಿನಗಳ ಆಶಯವಾಗಿದ್ದು, ನಮಗದು ಈವರೆಗೆ ಸಾಧ್ಯವಿರಲಿಲ್ಲ.
ಈ ರೀತಿಯ ಸ್ಟಿಕ್ಕರ್‍ಗಳನ್ನು ಮಾಡುವವರು ಅನೇಕರಿದ್ದಾರೆ, ಆದರೆ ಅವರು ಹೇಳಿದ್ದನ್ನು ಯಾವಾಗ ಮಾಡುತ್ತಾರೆ? ಅದೂ ವಾಟ್ಸಾಪ್ ನಲ್ಲಿ! ಹೌದು ವಾಟ್ಸ್ ಆಫ್ ಎ.ಐ. ಸ್ಟಿಕ್ಕರ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಪರಿಚಯಿಸಲಾಗಿದೆ.
ವಾಟ್ಸ್ ಆಫ್ ಬೀಟಾ ಬಳಕೆದಾರರು ವಾಟ್ಸ್ ಆಫ್ ನಲ್ಲಿ ಕೀಬೋರ್ಡ್ ತೆರೆಯುವಾಗ ಸ್ಟಿಕಿ ಟ್ಯಾಬ್‍ನಲ್ಲಿ ಹೊಸ 'ಕ್ರಿಯೇಟ್' ಬಟನ್ ಅನ್ನು ಪಡೆಯುತ್ತಾರೆ. ರಚಿಸು ಬಟನ್ ಅನ್ನು ಆಯ್ಕೆ ಮಾಡಿದರೆ ಸ್ಟಿಕ್ಕರ್ ಮಾಡಲು ನೀವು ವಿವರಣೆಯನ್ನು ಟೈಪ್ ಮಾಡಬಹುದು. ಈ ವಿವರಣೆಯನ್ನು ಆಧರಿಸಿ ಸ್ಟಿಕ್ಕರ್‍ಗಳನ್ನು ರಚಿಸಲಾಗುತ್ತದೆ. ವಾಟ್ಸ್ ಆಫ್ ಇನ್ಪೋ ವರದಿಯ ಪ್ರಕಾರ, ಎಐ ಸ್ಟಿಕ್ಕರ್‍ಗಳನ್ನು ಮೆಟಾದ ಸುರಕ್ಷಿತ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾಗಿದೆ.
ಎಐ ನಿಂದ ಉತ್ಪತ್ತಿಯಾಗುವ ಸ್ಟಿಕ್ಕರ್‍ಗಳು ಕೆಟ್ಟದ್ದಾಗಿದ್ದರೆ ಮತ್ತು ಅಪಾಯಕಾರಿಯಾಗಿದ್ದಲ್ಲಿ ವರದಿ ಮಾಡುವ ಸೌಲಭ್ಯವೂ ಇದೆ. ಈ ವೈಶಿಷ್ಟ್ಯವು ಇತ್ತೀಚಿನ ವಾಟ್ಸ್ ಆಫ್ ಬೀಟಾ ಆವೃತ್ತಿಯಲ್ಲಿ ಲಭ್ಯವಿರುತ್ತದೆ. ಆದಾಗ್ಯೂ, ಸೀಮಿತ ಸಂಖ್ಯೆಯ ಬೀಟಾ ಪರೀಕ್ಷಕರು ಮಾತ್ರ ಇದೀಗ ಅದನ್ನು ಪಡೆಯುತ್ತಿದ್ದಾರೆ. ಇತರರು ಅದನ್ನು ಶೀಘ್ರದಲ್ಲೇ ಪಡೆಯುತ್ತಾರೆ.