ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದಲ್ಲಿ ನಡೆಯುತ್ತಿರುವ ರಾಮಾಯಣ ಸಪ್ತಾಹದ ಎರಡನೆಯ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಉದ್ಘಾಟಿಸಿದರು.
ಈ ಸಂದರ್ಭ ಮಾತನಡಿದ ಅವರು ಯಕ್ಷಗಾನ ಕರ್ನಾಟಕ ರಾಜ್ಯದ ಕಲೆ. ಸಿರಿಬಾಗಿಲು ಪ್ರತಿಷ್ಠಾನದ ಮೂಲಕ ಸುಸಜ್ಜಿತ ಕಲಾಭವನ ನಿರ್ಮಿಸುವಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ಶ್ರಮ ಅಪಾರವಾದುದು. ಒಬ್ಬ ಕಲಾವಿದನಾಗಿ ಕಲೆಯ ಮೇಲಿನ ಅತೀವ ಪ್ರೀತಿಯಿಂದ ಸಿರಿಬಾಗಿಲು ಪ್ರತಿಷ್ಠಾನದ ಮೂಲಕ ಭವ್ಯ ಭವನ ನಿರ್ಮಿಸಿ ಕಲೆಯನ್ನು ಪೆÇೀಷಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಯಕ್ಷಗಾನ ಅರ್ಥಧಾರಿ ಶ್ರೀ ಹರೀಶ್ ಬಳಂತಿಮೊಗರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಶ್ರೀ ಹರಿ ಯಕ್ಷ ಬಳಗ ಮಂಗಳೂರು ಇವರಿಂದ ಭರತಾಗಮನ ಯಕ್ಷಗಾನ ತಾಳಮದ್ದಳೆ ನಡೆಯಿತು.