HEALTH TIPS

ಅಸ್ಸಾಂ: ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಮೊದಲ ಮಹಿಳಾ ನಿರ್ದೇಶಕಿ ನೇಮಕ

            ಸ್ಸಾಂ: ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರನ್ನು ಕ್ಷೇತ್ರ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ.

             ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಡಾ.ಸೊನಾಲಿ ಘೋಷ್‌ ಅಸ್ಸಾಂ ಸರ್ಕಾರದಿಂದ ನೇಮಕಗೊಂಡಿರುವ ನಿರ್ದೇಶಕಿ. ಸೆಪ್ಟೆಂಬರ್‌ 1 ರಿಂದ ಇವರು ಅಧಿಕಾರವಹಿಸಿಕೊಳ್ಳಲಿದ್ದಾರೆ.

ಇವರು ನಾಗಾಂವ್, ಗೋಲಾಘಾಟ್, ಕರ್ಬಿ ಆಂಗ್ಲಾಂಗ್, ಸೋನಿತ್‌ಪುರ ಮತ್ತು ಬಿಸ್ವನಾಥ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ.


           ಹಾಲಿ ನಿರ್ದೇಶಕರಾಗಿರುವ ಜತೀಂದ್ರ ಶರ್ಮಾ ಅವರು ಆಗಸ್ಟ್‌ 31ರಂದು ನಿವೃತ್ತಿ ಹೊಂದಲಿದ್ದಾರೆ. ಸೆ.1 ರಿಂದ ಸೋನಾಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

            ಈ ಅರಣ್ಯಕ್ಕೆ ಮೊದಲ ಮಹಿಳಾ ನಿರ್ದೇಶಕಿಯಾಗಿ ಅಧಿಕಾರವಹಿಸಿಕೊಳ್ಳುತ್ತಿರುವ ಖ್ಯಾತಿ ಸೊನಾಲಿ ಅವರಿಗೆ ಸಲ್ಲುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

              ಸೊನಾಲಿ ಅವರು ಇಂಡೋ-ಭೂತಾನ್ ಮಾನಸ್ ಭೂಭಾಗಗಳಲ್ಲಿ ಹುಲಿಗಳಿಗೆ ಆವಾಸಸ್ಥಾನದ ಸೂಕ್ತತೆಗೆ ಸಂಬಂಧಿಸಿದಂತೆ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries