ಕಾಸರಗೋಡು: ಮೀನುಗಾರರ ಕಲ್ಯಾಣ ಮಂಡಳಿ ಮೂಲಕ ಮೀನುಗಾರರಿಗೆ ಮತ್ತು ಮಿತ್ರ ಕಾರ್ಮಿಕರಿಗೆ ವಿತರಿಸುವ ಸವಲತ್ತುಗಳನ್ನು ಸಕಾಲದಲ್ಲಿ ವಿತರಿಸುವ ಉದ್ದೇಶದಿಂದ ಮೀನುಗಾರರು,ಮಿತ್ರ ಕಾರ್ಮಿಕರು,ಮೀನುಗಾರಿಕ ಬೋಟ್ ಮಾಲೀಕರು, ಮೀನುಗಾರಿಕಾ ಸಲಕರಣೆಗಳ ಮಾಲೀಕರು ಮುಂತಾದವರು ಮೀನುಗಾರರ ಕಲ್ಯಾಣ ಮಂಡಳಿಗೆ ಪಾವತಿಸಬೇಕಾದ ಅಂಶದಾಯ ಬಾಕಿಯನ್ನು ವಸೂಲು ಮಾಡಲು ಅಗಸ್ಟ್ 15ರಿಂದ 30ರವರೆಗೆ ಮೀನುಗಾರಿಕೆಯ ಗ್ರಾಮಗಳನ್ನು ಕೇಂದ್ರೀಕರಿಸಿ ರಾಜ್ಯ ಮಟ್ಟದ ಅಂಶಾದಾಯ ವಸೂಲಿ ಕಾರ್ಯಕ್ರಮ ನಡೆಸಲಾಗುತ್ತದೆ.
ಮೀನುಗಾರರ ಕಲ್ಯಾಣ ಮಂಡಳಿಗೆ ಪಾವತಿಸಲಿರುವ ಅಂಶದಾಯದ ಮೊತ್ತದ ಬಾಕಿ ಸಹಿತ ಪಾವತಿಸಿ ಅಭಿಯಾನದೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ವಲಯದ ಎಕ್ಸಿಕ್ಯೂಟಿವ್ ಕಮಿಷನ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (0487 2383053, 0487 2383088)ಸಂಪರ್ಕಿಸುಂತೆ ಪ್ರಕಟಣೆ ತಿಳಿಸಿದೆ.