ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ವಲಯದ 17 ನೇ ವರ್ಷದ ಕುಟುಂಬ ಸಂಗಮ ಕಾರ್ಯಕ್ರಮ ವಿದ್ಯಾನಗರ ಸನ್ ರೈಸ್ ಪಾರ್ಕ್‍ನಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ದಂಪತಿಗಳ ಅದೃಷ್ಟ ಫಲಿತಾಂಶದಲ್ಲಿ ಆಯ್ಕೆಯಾದ ರಾಜಶೇಖರ್ ಮತ್ತು ವಿದ್ಯಾ ಅವರು ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ ಸಿ ಅಬ್ರಹಾಂ, ಜಿಲ್ಲಾ
ಕಾರ್ಯದರ್ಶಿ ಸುಗುಣನ್ ಇರಿಯ, ಜಿಲ್ಲಾ ಕೋಶಾಧಿಕಾರಿ ವೇಣು ವಿ. ವಿ . ರಾಜ್ಯ ಸಮಿತಿ ಸದಸ್ಯರಾದ ಹರೀಶ್ ಪಾಲಕುನ್ನು, ಭರತನ್ ಎನ್.ಎ, ವಲಯ ನಿರೀಕ್ಷಕ ವಿಜಯನ್ ಶೃಂಗಾರ್ ಉಪಸ್ಥಿತರಿದ್ದರು. ವಲಯ ಅಧ್ಯಕ್ಷ ವಾಸು ಎ. ಕಾರ್ಯದರ್ಶಿ ಚಂದ್ರಶೇಖರ ಖಜಾಂಚಿ ರೇಖಾ ನೇತೃತ್ವ ವಹಿಸಿದ್ದರು. ಸಾಂಸ್ಕೃತಿಕ ಸಮಿತಿಯ ಸಂಯೋಜಕ ಮಕ್ಸೂಸ್ ವಂದಿಸಿದರು.