ಸಮರಸ ಚಿತ್ರಸುದ್ದಿ: ಕಾಸರಗೋಡು: ಬಿಲ್ಡ್‍ಅಪ್ ಕಾಸರಗೋಡು ಸೊಸೈಟಿ ವತಿಯಿಂದ ಕಾಸರಗೋಡು ವಿದ್ಯಾನಗರದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಅವರನ್ನು ಗೌರವಿಸಲಾಯಿತು. ಸಂಘಟನೆ ಅಧ್ಯಕ್ಷ ರವೀಂದ್ರನ್ ಕನ್ನಂಗಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸುಜಾತಾ, ರಫೀಕ್ ಮಾಸ್ಟರ್ ಪೈವಳಿಕೆ, ದಯಾಕರ್ ಮಾಡ ಮೊದಲಾದವರು ಉಪಸ್ಥಿತರಿದ್ದರು.