ಪೆರ್ಲ : ಕೃಷಿ ಸಂಸ್ಕøತಿ ಮರೆತಲ್ಲಿ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದು ಪ್ರಗತಿಪರ ಕೃಷಿಕ, ನಿವೃತ್ತ ಮುಖ್ಯ ಶಿಕ್ಷಕ ಸದಾನಂದ ಶೆಟ್ಟಿ ಕುದ್ವ ತಿಳಿಸಿದ್ದಾರೆ. ಅವರು ಸಿಂಹ ಮಾಸದ ಒಂದನೇ ದಿನವಾದ ಗುರುವಾರ ಕೇರಳ ಗ್ರಾಮೀಣ ಬ್ಯಾಂಕ್ ಪೆರ್ಲ ಶಾಖೆ ವತಿಯಿಂದ ಆಯೋಜಿಸಲಾಗಿದ್ದ ಪ್ರಗತಿಪರ ಕೃಷಿಕರಿಗಾಗಿ ಆಯೋಜಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೃಷಿ ಈ ನಾಡಿನ ಜೀವಾಳವಾಗಿದ್ದು, ಕೃಷಿವಲಯಕ್ಕೆ ಸರ್ಕಾರದಿಂದ ಹೆಚ್ಚಿನ ಉತ್ತೇಜನ ಲಭಿಸಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು. ಬ್ಯಾಂಕ್ ಸಹಾಯಕ ಪ್ರಬಂಧಕಿ ಲಕ್ಷ್ಮೀ ವಿ.ಎಸ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪ್ರಗತಿಪರ ಕೃಷಿಕರಾದ ಸದಾನಂದ ಶೆಟ್ಟಿ ಕುದ್ವ, ಬಾಲಕೃಷ್ಣ ಆಳ್ವ ಎಣ್ಮಕಜೆ ಮೇಗಿನಮನೆ, ಗೋವಿಂದ ನಾಯಕ್ ಕುಕ್ಕಿಲ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ವಯ ಮಂಜೂರುಗೊಳಿಸಲಾದ ಕೃಷಿ ಸಾಲವನ್ನು ಗ್ರಾಹಕರಿಗೆ ವಿತರಿಸಲಾಯಿತು. ಬ್ಯಾಂಕಿನ ಸಹಾಯಕ ಪ್ರಬಂಧಕಿ ಸೌಮ್ಯಶ್ರೀ, ಸಿಬ್ಬಂದಿ ನಾರಾಯಣ ನಾಯ್ಕ್, ಅನಂತ, ರವಿ ಕುಮಾರ್, ಕುಶಲ ಮೊದಲದವರು ಉಪಸ್ಥಿತರಿದ್ದರು.