ನವದೆಹಲಿ: ವಿರೋಧ ಪಕ್ಷಗಳ ಒಕ್ಕೂಟ 'ಇಂಡಿಯಾ' ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರವೂ ವಾಗ್ದಾಳಿ ನಡೆಸಿದರು. ಭಾರತವು ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗುವ ಹಾದಿಯಲ್ಲಿ 'ಇಂಡಿಯಾ' ಒಂದು ತೊಡಕಾಗಿದೆ ಎಂದರು.
ನವದೆಹಲಿ: ವಿರೋಧ ಪಕ್ಷಗಳ ಒಕ್ಕೂಟ 'ಇಂಡಿಯಾ' ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರವೂ ವಾಗ್ದಾಳಿ ನಡೆಸಿದರು. ಭಾರತವು ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗುವ ಹಾದಿಯಲ್ಲಿ 'ಇಂಡಿಯಾ' ಒಂದು ತೊಡಕಾಗಿದೆ ಎಂದರು.
ಇಲ್ಲಿಯ ಪ್ರಗತಿ ಮೈದಾನದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಅವರು ಹೀಗೆ ಹೇಳಿದರು.
'ಭಾರತ' ಎಂದೇ ದೇಶವನ್ನು ಉಲ್ಲೇಖಿಸಿದ ಅವರು, 'ಇಂಡಿಯಾ' ಒಕ್ಕೂಟವು 'ಭಾರತ' ಎದುರಿಸುತ್ತಿರುವ ಗಂಭೀರ ಅಪಾಯ. ಭ್ರಷ್ಟಾಚಾರ, ಪರಿವಾರವಾದ, ಓಲೈಕೆ ರಾಜಕಾರಣ ತೊಲಗಬೇಕು ಎಂದು ಇಡೀ 'ಭಾರತ' ಒಕ್ಕೊರಲಿನಿಂದ ಕೂಗುತ್ತಿದೆ ಎಂದರು.
ನೇಕಾರರು ಮತ್ತು ಕೈಮಗ್ಗ ವಲಯದ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2014ರಿಂದ ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಈ ವೇಳೆ ಬೆಳಕು ಚೆಲ್ಲಿದರು. ದೇಶದ ಕೈಮಗ್ಗ, ಖಾದಿ ಮತ್ತು ಜವಳಿ ವಲಯವನ್ನು ವಿಶ್ವದರ್ಜೆಗೇರಿಸುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಶ್ರಮವಹಿಸುತ್ತಿದೆ ಎಂದರು.