ಕಾಸರಗೋಡು : ಜಿಲ್ಲಾ ಅಕ್ಷಯ ಯೋಜನೆ ವತಿಯಿಂದ 'ಇ-ಓಣಂ ಪೊನ್ನೋಣಂ' ಓಣಂ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಿವೃತ್ತ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ (ಎಡಿಎಂ)ಎ.ಕೆ.ರಮೇಂದ್ರನ್ ಸಮಾರಂಭ ಉದ್ಘಾಟಿಸಿದರು.
ಚಂದ್ರಯಾನ-3 ಯೋಜನಾ ತಮಡದ ಸದಸ್ಯ ಸನೋಜ್ ಪಡಣ್ಣಕ್ಕಾಡ್, ಚಿತ್ರನಟ ಪಿ.ಪಿ.ಕುಞÂಕೃಷ್ಣನ್ ಮಾಸ್ಟರ್ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭ ಸಹಾಯಕ ತಹಸೀಲ್ದಾರ್ ತುಳಸಿ ರಾಜ್, ಹೊಜದುರ್ಗ ತಾಲೂಕು ನಾಗರಿಕ ಸರಬರಾಜು ಅಧಿಕಾರಿ ಕೆ.ಎನ್.ಬಿಂದು, ಎಂವಿಡಿ ಕೆ.ಟಿ.ಹರಿದಾಸನ್ ಅವರನ್ನು ಜಿಲ್ಲಾ ಯೋಜನಾ ವ್ಯವಸ್ಥಾಪಕ ಕಪಿಲ್ ದೇವ್ ಅವರು ಸನ್ಮಾನಿಸಿದರು. ವಿವಿಧ ಕಲಾ ಕಾರ್ಯಕ್ರಮಗಳೂ ನಡೆದವು. ಸುಧಿಲ್ ಮುಂಡಾನಿ, ಬಿ.ಸಂತೋಷ್ ಕುಮಾರ್, ಪಿ.ಡಿ.ಅಬ್ದುಲ್ ರಹಮಾನ್, ಸಿ.ಕೆ.ವಿಜಯನ್, ಅಬ್ದುಲ್ ರಹಮಾನ್ ಬೋವಿಕಾನ ಉಪಸ್ಥಿತರಿದ್ದರು. ಸಜಿನ್ ರಾಜ್ ಸ್ವಾಗತಿಸಿದರು. ಪ್ರಮೋದ್ ಕೆ. ರಾಮ್ ವಂದಿಸಿದರು.